'ಐಸಿಸಿ ಪ್ಲೇಯರ್ ಆಫ್ ದಿ ಮಂತ್ ' ಪ್ರಶಸ್ತಿಗೆ ಶೆಫಾಲಿ ವರ್ಮಾ, ಸ್ನೇಹ್ ರಾಣಾ ನಾಮನಿರ್ದೇಶನ

ಭಾರತದ ಮಹಿಳಾ ತಂಡದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಐಸಿಸಿ ಮಹಿಳಾ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಶೆಫಾಲಿ ವರ್ಮಾ
ಶೆಫಾಲಿ ವರ್ಮಾ

ದುಬೈ: ಭಾರತದ ಮಹಿಳಾ ತಂಡದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಐಸಿಸಿ ಮಹಿಳಾ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಭಾರತೀಯ ಜೋಡಿಯಲ್ಲದೆ, ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕೂಡ ಮಹಿಳಾ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಪುರುಷರಲ್ಲಿ ನಾಮನಿರ್ದೇಶಿತರಾದವರ ಪೈಕಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ ಮತ್ತು ವೇಗಿ ಕೈಲ್ ಜೇಮೀಸನ್, ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್. ಸೇರಿದ್ದಾರೆ.

ಈಗಾಗಲೇ ಆಟದ ಚಿಕ್ಕ ಸ್ವರೂಪದಲ್ಲಿ  ಎಲ್ಲರನ್ನೂ ಮೆಚ್ಚಿಸಿದ್ದ 17 ವರ್ಷದ ಶೆಫಾಲಿ, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು ಮತ್ತು ಬ್ರಿಸ್ಟಲ್ ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಎಂದು ಹೆಸರಿಸಲ್ಪಟ್ಟರು. ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 96 ಮತ್ತು 63 ರನ್ ಗಳಿಸಿ ಅರ್ಧಶತಕಗಳನ್ನು ಗಳಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ ಶೆಫಾಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ನಾಲ್ಕನೇಯವರಾಗಿದ್ದಾರೆ. ಇದಲ್ಲದೆ ಎರಡು ಏಕದಿನ ಪಂದ್ಯಗಳಲ್ಲಿ 85.50 ಸ್ಟ್ರೈಕ್ ರೇಟ್ ನಲ್ಲಿ 59 ರನ್ ಗಳಿಸಿದ್ದಾರೆ.

ಆಲ್‌ರೌಂಡರ್ ರಾಣಾ ಅವರು ಬ್ರಿಸ್ಟಲ್‌ನಲ್ಲಿ ಸ್ಮರಣೀಯ ಚೊಚ್ಚಲ ಟೆಸ್ಟ್ ಪಂದ್ಯವೊಂದರಲ್ಲಿ 154 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದ್ದರು. ಪಂದ್ಯದ ಪ್ರಾರಂಭದಲ್ಲಿ ಅವರು 131/೪ ಗಳಿಸಿದ್ದರು. ಅಲ್ಲದೆ ಏಕದಿನ ಪಂದ್ಯದಲ್ಲಿ ಅವರು 43 ಕ್ಕೆ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com