ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಆಸ್ಪತ್ರೆಗೆ ದಾಖಲು

ಅಬುಧಾಬಿಯಲ್ಲಿ ಶನಿವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2021 ಪಂದ್ಯದ ವೇಳೆ ತಂಡದ ಸಹ ಆಟಗಾರನಿಗೆ ಡಿಕ್ಕಿ ಹೊಡೆದ ನಂತರ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಹ ಆಟಗಾರನಿಗೆ ಡಿಕ್ಕಿ: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಆಸ್ಪತ್ರೆಗೆ ದಾಖಲು
ಸಹ ಆಟಗಾರನಿಗೆ ಡಿಕ್ಕಿ: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಆಸ್ಪತ್ರೆಗೆ ದಾಖಲು

ಅಬುಧಾಬಿ: ಅಬುಧಾಬಿಯಲ್ಲಿ ಶನಿವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2021 ಪಂದ್ಯದ ವೇಳೆ ತಂಡದ ಸಹ ಆಟಗಾರನಿಗೆ ಡಿಕ್ಕಿ ಹೊಡೆದ ನಂತರ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಾಫ್ ಡು ಪ್ಲೆಸ್ಸಿಸ್  ಅವರು ಪೇಶಾವರ ಝೆಲ್ಮಿ ವಿರುದ್ಧ ಕ್ವೆಟ್ತಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದ ವೇಳೆ ಫೀಲ್ಡಿಂಗ್ ಮಾಡುವಾಗ ಮುಹಮ್ಮದ್ ಹ್ಯಾಸ್‌ನೇನ್ ಅವರಿಗೆ ಡಿಕ್ಕಿಯಾಗಿದ್ದಾರೆ. ಈ ವೇಳೆ ಪ್ಲೆಸ್ಸಿಸ್ ತಲೆಗೆ ಪೆಟ್ಟಾಯಿತು, ಆದರೆ ಹ್ಯಾಸ್‌ನೇನ್ ಅವರ ಮೊಣಕಾಲಿಗೆ ಪ್ಲೆಸ್ಸಿಸ್ ತಲೆ ತಾಕಿದ ಕಾರಣ ಅವರು ನೆಲದ ಮೇಲೆ ಬಿದ್ದಿದ್ದಾರೆ.

ಪೇಶಾವರ್ ಝಲ್ಮಿ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿಡೇವಿಡ್ ಮಿಲ್ಲರ್ ಮೊಹಮ್ಮದ್ ನವಾಜ್ ಅವರನ್ನು ರನ್ನಿಗಾಗಿ ಓಡಿಸಿದ್ದಾಗ ಈ ಘಟನೆ ನಡೆದಿದೆ.

ಮೈದಾನದಲ್ಲಿ ವೈದ್ಯಕೀಯ ಸಹಾಯಕರ ನೆರವಿನ ನಂತರ ಪ್ಲೆಸ್ಸಿಸ್ ಎದ್ದು ಮತ್ತೆ ಡ್ರೆಸ್ಸಿಂಗ್ ಕೋಣೆಗೆ ನಡೆದರು. ನಂತರ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com