ಜೋಸ್ ಬಟ್ಲರ್
ಜೋಸ್ ಬಟ್ಲರ್

ಕಾಲಿನ ಗಾಯ: ಶ್ರೀಲಂಕಾ ಸರಣಿಯಿಂದ ಜೋಸ್ ಬಟ್ಲರ್ ಔಟ್!

ಇಂಗ್ಲೇಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಾಲಿಗೆ ಗಾಯವಾಗಿರುವುದರಿಂದ ಇಂಗ್ಲೆಂಡ್-ಲಂಕಾ ತಂಡದ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ. 
Published on

ಲಂಡನ್: ಇಂಗ್ಲೇಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಾಲಿಗೆ ಗಾಯವಾಗಿರುವುದರಿಂದ ಇಂಗ್ಲೆಂಡ್-ಲಂಕಾ ತಂಡದ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ. 

ಜೂ.23 (ಬುಧವಾರ) ಮೊದಲ ಟಿ20 ಪಂದ್ಯದಲ್ಲಿ ಜೋಸ್ ಬಟ್ಲರ್ ಕಾಲಿನ ಸ್ನಾಯು ಛಿದ್ರವಾಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಪತ್ತೆಯಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿದೆ. ಪಂದ್ಯದ ಅಂತ್ಯದ ವೇಳೆಗೆ ಬಟ್ಲರ್ ಗೆ ಬಿಗಿತ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗೆಲುವು ಸಾಧಿಸಿತ್ತು. 

ಯಾರ್ಕ್‌ಷೈರ್ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಮುಂಬರುವ ಅಂತಾರಾಷ್ಟ್ರೀಯ ಸರಣಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

X

Advertisement

X
Kannada Prabha
www.kannadaprabha.com