ಮದರ್ಸ್ ಡೇ: ಟೀಂ ಇಂಡಿಯಾ ಕ್ರಿಕೆಟಿಗರಿಂದ ಅಮ್ಮಂದಿರಿಗೆ ಶುಭ ಹಾರೈಕೆ

ಇಂದು (ಮೇ ಎರಡನೇ ಭಾನುವಾರ) ವಿಶ್ವಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಅದೇ ಸಮಯದಲ್ಲಿ , ಭಾರತೀಯ ಕ್ರಿಕೆಟಿಗರು ತಾಯಂದಿರ ದಿನದಂದು ತಮ್ಮ ಅಮ್ಮಂದಿರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳಿದ್ದಾರೆ.
ತಾಯಿಯೊಂದಿಗೆ ಸಚಿನ್ ತೆಂಡೂಲ್ಕರ್
ತಾಯಿಯೊಂದಿಗೆ ಸಚಿನ್ ತೆಂಡೂಲ್ಕರ್
Updated on

ಇಂದು (ಮೇ ಎರಡನೇ ಭಾನುವಾರ) ವಿಶ್ವಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಅದೇ ಸಮಯದಲ್ಲಿ , ಭಾರತೀಯ ಕ್ರಿಕೆಟಿಗರು ತಾಯಂದಿರ ದಿನದಂದು ತಮ್ಮ ಅಮ್ಮಂದಿರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ತಾಯಿಗೆ ಧನ್ಯವಾದ ಹೇಳಿದರೆ, ವೀರೇಂದ್ರ ಸೆಹ್ವಾಗ್ ತಮ್ಮ ತಾಯಿಗೆ ಹಿಂದಿಯಲ್ಲಿ ಭಾವನಾತ್ಮಕ ಕವಿತೆ ಬರೆದಿದ್ದಾರೆ.

"ನೀವು ಎಷ್ಟೇ ವಯಸ್ಸಾದರೂ ನನಗಾಗಿ ಪ್ರಾರ್ಥಿಸುವವರು, ತಾಯಿ ನಾನು ಯಾವಾಗಲೂ ನಿಮ್ಮಮಗು ನನ್ನ ಜೀವನದಲ್ಲಿ ಇಬ್ಬರು ತಾಯಂದಿರು ನನ್ನನ್ನು ಪೋಷಿಸಿ ಪ್ರೀತಿಸುತ್ತಿದ್ದರು, ಅವರು ಆಯಿ ಹಾಗೂ ಕಾಕು ನನಗೆ ತುಂಬಾ ಸಂತಸವಾಗಿದೆ, ನಾನು ಇಲ್ಲಿ ಕೆಲ ಹಳೆಯ ಕೆಲ ಫೋಟೋಗಳನ್ನು ಹಂಚಿಕೊಳ್ಳುವೆ" ಸಚಿನ್ ಟ್ವೀಟ್ ಮಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ತಾಯಿಯನ್ನು "ಅತಿದೊಡ್ಡ ಸ್ಫೂರ್ತಿ" ಎಂದು ಬಣ್ಣಿಸಿದ್ದಾರೆ. "ಯಾವಾಗಲೂ ನನ್ನ ಶಕ್ತಿಯ ಆಧಾರಸ್ತಂಭವಾಗಿದ್ದಕ್ಕಾಗಿ ಮತ್ತು ಸರಿಯಾದ ಮಾರ್ಗದರ್ಶನವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ತಾಯಿ. ನೀವು ನನ್ನ ಅತಿದೊಡ್ಡ ಸ್ಫೂರ್ತಿತಾಯಂದಿರ ದಿನದಂದು ಎಲ್ಲಾ ಪ್ರಬಲ ಅಮ್ಮಂದಿರಿಗೆ ಶುಭ ಹಾರೈಸುತ್ತೇನೆ #LoveYouMa" ರೈನಾ ಟ್ವೀಟ್ ಮಾಡಿದ್ದಾರೆ.

ಸ್ಟಾರ್ ಇಂಡಿಯನ್ ಓಪನರ್ ಶಿಖರ್ ಧವನ್ ಕೂಡ "ಶ್ರೇಷ್ಠ ಶಿಕ್ಷಕ" (ತಾಯಿ) ಗೆ ತಾಯಂದಿರ ದಿನದ ಶುಭಾಶಯಗಳನ್ನು ಕೋರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com