ಟೀಂ ಇಂಡಿಯಾ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಕ್ಯಾನ್ಸರ್ ನಿಂದ ನಿಧನ

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ (63) ಅವರು ತಮ್ಮ ಮೀರತ್ ನಿವಾಸದಲ್ಲಿ ಗುರುವಾರ ನಿಧನರಾದರು. 
ಭುವನೇಶ್ವರ್ ಕುಮಾರ್ ಅವರ ಕುಟುಂಬ
ಭುವನೇಶ್ವರ್ ಕುಮಾರ್ ಅವರ ಕುಟುಂಬ
Updated on

ಮೀರತ್: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ (63) ಅವರು ತಮ್ಮ ಮೀರತ್ ನಿವಾಸದಲ್ಲಿ ಗುರುವಾರ ನಿಧನರಾದರು. ಅವರು ಕ್ಯಾನ್ಸರ್ ಗೆ ಕೀಮೋಥೆರಪಿಗೆ ಒಳಗಾಗಿದ್ದರು ಮತ್ತು ಪಿತ್ತಜನಕಾಂಗದ ಕಾಯಿಲೆಗಳನ್ನೂ ಹೊಂದಿದ್ದ ಅವರ ಆರೋಗ್ಯ ಸ್ಥಿತಿ ಎರಡು ವಾರಗಳಿಂದ ತೀರಾ ಗಂಭೀರವಾಗಿತ್ತು.

ಉತ್ತರ ಪ್ರದೇಶದ ಮಾಜಿ ಪೊಲೀಸ್ ಉದ್ಯೋಗಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಿಂಗ್ ಸ್ವಯಂಪ್ರೇರಿತವಾಗಿ ನಿವೃತ್ತಿ ಹೊಂದಲು ನಿರ್ಧರಿಸಿದ್ದರು

ಕಳೆದ ವರ್ಷದ ಐಪಿಎಲ್‌ಗಾಗಿ ಭುವನೇಶ್ವರ್  ಯುಎಇಯಲ್ಲಿ ಆಡುತ್ತಿದ್ದಾಗ ಸೆಪ್ಟೆಂಬರ್ 2020 ರಲ್ಲಿ ಅವರಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ಯುಕೆ ಯಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರ ಸಿಂಗ್ ನವದೆಹಲಿಯ ಆಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ವಾರದ ಹಿಂದೆ ಆವರ ಆರೋಗ್ಯ ಹದಗೆಟ್ಟಿತು, ನಂತರ ಅವರನ್ನು ಮೀರತ್‌ನ ಗಂಗಾ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ನಂತರ ಕಿರಣ್ ಪಾಲ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ ಇಂದ್ರೇಶ್ ದೇವಿ ಮತ್ತು ಮಗ ಮತ್ತು ಮಗಳು ಇದ್ದಾರೆ.

ಪ್ರಸ್ತುತ ಮನೆಯಲ್ಲಿರುವ ಭುವನೇಶ್ವರ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿಲ್ಲ, ಇದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಸೇರಿದೆ. ಆದಾಗ್ಯೂ, ಅವರು ಜುಲೈನಲ್ಲಿ ಶ್ರೀಲಂಕಾದ ಸೀಮಿತ ಓವರ್ ತಂಡದೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com