ಟಿ-20 ವಿಶ್ವಕಪ್: 90 ಕೆಜಿ ತೂಕದ ವ್ಯಕ್ತಿಗೆ ಡಿಕ್ಕಿ ಹೊಡೆದ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್
ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪೆಟ್ಟು ತಿಂದಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಶಹಜಾಜ್ ಗೆ ಹಾರ್ದಿಕ್ ಪಾಂಡ್ಯ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ.
ನಿನ್ನೆಯ ಪಂದ್ಯದ ವೇಳೆ, ನವೀನ್ ಉಲ್ ಹಕ್ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಈ ವೇಳೆ ಫೀಲ್ಡಿಂಗ್ ನಲ್ಲಿದ್ದ ಅಫ್ಘಾನಿಸ್ತಾನದ ಆಟಗಾರ ನಜೀಬುಲ್ಲಾ, ಚೆಂಡನ್ನು ಕೈಚೆಲ್ಲಿದ್ರು. ಈ ವೇಳೆ ರನ್ ಗಳಿಸುವ ಭರದಲ್ಲಿದ್ದ ಪಾಂಡ್ಯ ವೇಗವಾಗಿ ಓಡಿ ಬಂದು 90 ಕೆಜಿ ತೂಕದ ವ್ಯಕ್ತಿ ಮೊಹಮ್ಮದ್ ಶಹಜಾಜ್ ಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.
ಈ ಘಟನೆ ನಂತರ ಫಿಸಿಯೋ ಗ್ರೌಂಡ್ ಗೆ ಬಂದರು. ಅಲ್ಲದೆ, ಹಾರ್ದಿಕ್ ಪಾಂಡ್ಯಗೆ ಚಿಕಿತ್ಸೆ ನೀಡಿದ್ರು. ಇಬ್ಬರು ಆಟಗಾರರಿಗೆ ಹೆಚ್ಚೇನೂ ತೊಂದರೆಯಾಗಲಿಲ್ಲ. ನಂತರ ನಗು-ನಗುತಲೇ ಮತ್ತೆ ಪಂದ್ಯದಲ್ಲಿ ಇಬ್ಬರು ತಲ್ಲೀಣರಾದರು.
ಟಿ-20 ವಿಶ್ವಕಪ್ ನಲ್ಲಿ ಭಾರತ, ಅಫ್ಘಾನಿಸ್ತಾನದ ವಿರುದ್ಧ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿದೆ. ಟ್ವೆಂಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮೊದಲು ಗೆಲುವು ದಾಖಲಿಸಿದೆ. ನಿನ್ನೆ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ 66 ರನ್ ಗಳ ಅಂತರದಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ