ಸ್ಪರ್ಧಾತ್ಮಕ ಪಿಚ್ ಸಿದ್ದಪಡಿಸಿದ ಗ್ರೀನ್ ಪಾರ್ಕ್ ಸಿಬ್ಬಂದಿಗೆ 35 ಸಾವಿರ ರೂ. ನೀಡಿದ ರಾಹುಲ್ ದ್ರಾವಿಡ್
ಕಾನ್ಪುರ: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಾವು ಎಲ್ಲರಂತಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿದ್ದಕ್ಕಾಗಿ ಶಿವಕುಮಾರ್ ನೇತೃತ್ವದ ಗ್ರೀನ್ ಪಾರ್ಕ್ ಗ್ರೌಂಡ್‌ಸ್ಟಾಫ್‌ಗೆ 35,000 ರೂಪಾಯಿ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಕೊನೆಗೊಂಡಿದೆ. ಐದನೇ ದಿನದಾಟದ ಕೊನೆಯವರೆಗೂ ಜಯ ಯಾರಿಗೆ ದೊರೆಯಲಿದೆ ಎಂಬ ಕುತೂಹಲ ಹುಟ್ಟುಹಾಕಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋಲಿನಿಂದ ಪಾರಾಗಿದೆ. ಇಂತಹ ಸ್ಪರ್ಧಾತ್ಮಕ ಪಿಚ್ ಸಿದ್ದಪಡಿಸಿದ್ದಕ್ಕಾಗಿ ರಾಹುಲ್ ದ್ರಾವಿಡ್ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣ ಗ್ರೀನ್ ಪಾರ್ಕ್ ನ ಸಿಬ್ಬಂದಿಗೆ 35 ಸಾವಿರ ರೂಪಾಯಿ ನೀಡಿದ್ದಾರೆ.
"ಶ್ರೀ ರಾಹುಲ್ ದ್ರಾವಿಡ್ ಅವರು ನಮ್ಮ ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35,000 ರೂಪಾಯಿ ನೀಡಿದ್ದಾರೆ" ಎಂದು ನಾವು ಅಧಿಕೃತ ಘೋಷಣೆ ಮಾಡಲು ಬಯಸುತ್ತೇವೆ ಎಂದು ಪಂದ್ಯದ ನಂತರ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ಪ್ರಕಟಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ