ಐಪಿಎಲ್ 2021: ರಾಜಸ್ಥಾನ ರಾಯಲ್ಸ್ ತಂಡವನ್ನು 86 ರನ್ ಗಳಿಂದ ಮಣಿಸಿದ ಕೆಕೆಆರ್
ಶಾರ್ಜಾ: ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 86 ರನ್ ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ಬೃಹತ್ ಮೊತ್ತ ಪೇರಿಸಿತು. ಕೆಕೆಆರ್ ಪರ ಶುಭ್ ಮನ್ ಗಿಲ್ 56, ವೆಂಕಟೇಶ್ ಅಯ್ಯರ್ 38, ರಾಹುಲ್ ತ್ರಿಪಾಠಿ 21 ರನ್ ಗಳಿಸಿದರು. ರಾಜಸ್ಥಾನ ರಾಯಲ್ಸ್ ಪರ ರಾಹುಲ್ ತೇವಾಟಿಯಾ, ಗ್ಲೇನ್ ಫಿಲಿಪ್ಸ್ ಮತ್ತು ಚೇತನ್ ಸಕಾರಿಯಾ ತಲಾ ಒಂದೊಂದು ವಿಕೆಟ್ ಪಡೆದರು.
ಕೆಕೆಆರ್ ನೀಡಿದ ಬೃಹತ್ ರನ್ ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ 16.1 ಓವರ್ ಗಳಿಗೆ ಆಲೌಟ್ ಆಗುವುದರೊಂದಿಗೆ ಕೇವಲ 85 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ಪರ ಬೌಲರ್ ಶಿವಂ ಮಾವಿ 4, ಲಾಕಿ ಫರ್ಗುಸನ್ 3, ಶಾಹಿೂ್ ಅಲ್ ಹಸನ್ 1 ವಿಕೆಟ್ ಪಡೆದರು. ಶಿವಂ ಮಾವಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನವಾರದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ