ಟಿ-20 ವಿಶ್ವಕಪ್: ಉಮ್ರಾನ್ ಮಲಿಕ್ ಭಾರತದ ನೆಟ್ ಬೌಲರ್ 

ಇಂಡಿಯನ್ ಪ್ರೀಮಿಯರ್ (ಐಪಿಎಲ್) 2021 ರಲ್ಲಿ ತನ್ನ ವೇಗದ ಬೌಲಿಂಗ್ ನಿಂಧ ಎಲ್ಲರನ್ನೂ ಅಚ್ಚರಿಗೊಳಿಸಿದ ಉಮ್ರಾನ್ ಮಲಿಕ್, ಟಿ-20 ವಿಶ್ವಕಪ್ ಗಾಗಿ ಭಾರತ ತಂಡದ ನೆಟ್ ಬೌಲರ್ ಆಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಉಳಿಯುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್

ದುಬೈ: ಇಂಡಿಯನ್ ಪ್ರೀಮಿಯರ್ (ಐಪಿಎಲ್) 2021 ರಲ್ಲಿ ತನ್ನ ವೇಗದ ಬೌಲಿಂಗ್ ನಿಂಧ ಎಲ್ಲರನ್ನೂ ಅಚ್ಚರಿಗೊಳಿಸಿದ ಉಮ್ರಾನ್ ಮಲಿಕ್, ಟಿ-20 ವಿಶ್ವಕಪ್ ಗಾಗಿ ಭಾರತ ತಂಡದ ನೆಟ್ ಬೌಲರ್ ಆಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಉಳಿಯುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಉಮ್ರಾನ್ ಐಪಿಎಲ್ ಗೆ ಮುನ್ನ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಕೇವಲ ಒಂದು ಲಿಸ್ಟ್ ಎ ಪಂದ್ಯ ಮತ್ತು ಒಂದು ಟಿ 20 ಆಡಿದ್ದರು ಮತ್ತು ಈ ಋತುವಿನ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನಲ್ಲಿ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. 

ಕೋವಿಡ್ -19 ರ ಕಾರಣದಿಂದ ಟಿ ನಟರಾಜನ್ ಹೊರಗುಳಿದಾಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ಅವರ ಮೊದಲ ಪಂದ್ಯದಲ್ಲಿಯೇ ಭಾರೀ ಪ್ರಭಾವ ಬೀರಿದರು.

 ತಮ್ಮ ಮೊದಲ ಪಂದ್ಯದಲ್ಲಿ 150 ಕಿಮೀ ವೇಗದ ಬೌಲಿಂಗ್ ಮಾಡಿದರು. ಮತ್ತು ಅವರು ಈ ಐಪಿಎಲ್ ಅನ್ನು ವೇಗವಾಗಿ ಬೌಲ್ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com