
ನವದೆಹಲಿ: ಐಸಿಸಿ ಪುರುಷರ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿದ ನಂತರ ಭಾರತದ ಕೆಲವು ಭಾಗಗಳಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಭಾರತ- ಪಾಕಿಸ್ತಾನ ನಡುವಣ ಪಂದ್ಯ ಮುಗಿದ ನಂತರ ಟ್ವೀಟ್ ಮಾಡಿರುವ ಮಾಜಿ ಟೀಂ ಇಂಡಿಯಾ ಆರಂಭಿಕ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಬೂಟಾಟಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ, ನಿನ್ನೆ ದಿನ ದೇಶದ ಕೆಲವು ಕಡೆಗಳಲ್ಲಿ ಪಟಾಕಿ ಸಿಡಿಸುವುದರೊಂದಿಗೆ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಲಾಗಿದೆ. ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆ ಒಳ್ಳೆಯದು, ಆದರೆ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಏನು ಹಾನಿಯಾಗುತ್ತದೆ .ಇದರ ಹಿಂದೆ ಹಿಪೋಕ್ರಸಿ ಇದೆ ಎಂದು ಎಂದಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಟಿ-20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
Advertisement