ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದತಿಗೆ ಅಸಲಿ ಕಾರಣವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತೆರೆದಿಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕಳೆದುಕೊಳ್ಳುವಿಕೆ ಹಾಗೂ ಕೋವಿಡ್-19 ಎಲ್ಲಿ ಬರುತ್ತದೆಯೋ ಎಂಬ ಆಟಗಾರರ ಭಯದಿಂದಾಗಿ ಈ ಪಂದ್ಯ ರದ್ದಾಗಿರುವುದಾಗಿ ಅವರು ಹೇಳಿದ್ದಾರೆ.
ಟೀಂ ಇಂಡಿಯಾದ ಸಹಾಯಕ ಫಿಸಿಯೋ ಅವರಿಗೆ ಗುರುವಾರ ಕೋವಿಡ್-19 ಸೋಂಕು ದೃಢಪಟ್ಟ ನಂತರ ಭಾರತ- ಇಂಗ್ಲೆಂಡ್ ನಡುವಿನ ಅಂತಿಮ ಹಾಗೂ ಐದನೇಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.
ಪ್ರಾಮಾಣಿಕವಾಗಿ ಹೇಳುವುದಾದರೆ ಎಲ್ಲಾ ಹಣ ಮತ್ತು ಐಪಿಎಲ್ ಗಾಗಿ ಪಂದ್ಯ ರದ್ದುಗೊಂಡಿದೆ. ಐಪಿಎಲ್ ಕಳೆದುಕೊಳ್ಳುವುದು ಮತ್ತು ಕೋವಿಡ್ -19 ಸಾಂಕ್ರಾಮಿಕ ಎಲ್ಲಿ ಬಂದುಬಿಡುತ್ತದೆಯೋ ಎಂಬ ಆಟಗಾರರ ಭಯದಿಂದ ಟೆಸ್ಟ್ ಪಂದ್ಯ ರದ್ದುಗೊಂಡಿರುವುದಾಗಿ ವಾನ್ ಟೆಲಿಗ್ರಾಫ್ ನಲ್ಲಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಇನ್ನೊಂದು ವಾರದಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಆಟಗಾರರು ಉತ್ಸಾಹದಿಂದ ಆಡಬೇಕಿದೆ. ಆದರೆ, ಅವರು ಪಿಸಿಆರ್ ಪರೀಕ್ಷೆಗಳನ್ನು ನಂಬಬೇಕು, ಇದೀಗ ಈ ವೈರಸ್ ಬಗ್ಗೆ ಸಾಕಷ್ಟು ನಮಗೆ ತಿಳಿದಿದೆ. ಹೇಗೆ ಅದನ್ನು ಅತ್ಯುತ್ತಮ ರೀತಿಯಲ್ಲಿ ತಡೆಗಟ್ಟಬಹುದು ಎಂಬುದು ನಮಗೆ ಗೊತ್ತಿದೆ. ಆಟಗಾರರಿಗೆ ಡಬಲ್ ಲಸಿಕೆ ಹಾಕಲಾಗಿದೆ ಮತ್ತು ಜೈವಿಕ ಭದ್ರತೆಯನ್ನು ಬಹಳ ಬೇಗನೆ ಹೆಚ್ಚಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಆಟಕ್ಕೆ ಈ ಟೆಸ್ಟ್ ಪಂದ್ಯದ ಅಗತ್ಯವಿದೆ. ಸರಣಿಯು ಅದ್ಭುತವಾಗಿ ಸಜ್ಜುಗೊಂಡಿದೆ. ಟಾಸ್ ಗೆ 90 ನಿಮಿಷಗಳ ಮೊದಲ ಪಂದ್ಯ ರದ್ದುಗೊಳ್ಳುವುದು ಸರಿಯಲ್ಲ, ಇದು ಹಣ ಪಾವತಿಸುವ ಸಾರ್ವಜನಿಕರಿಗೆ ಸಂಪೂರ್ಣವಾಗಿ ಅಗೌರವ ನೀಡಿದಂತಾಗುತ್ತದೆ ಎಂದು ವಾನ್ ಹೇಳಿದ್ದಾರೆ.
ವೈರಸ್ ಬಗ್ಗೆ ಚೆನ್ನಾಗಿ ತಿಳಿದಿರುವ ವೈದ್ಯಕೀಯ ಸಿಬ್ಬಂದಿ ಕೂಡ ಆಟಗಾರರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಇಂಡಿಯಾ ಆಟಗಾರರು ಆಡುವುದಿಲ್ಲವೆಂದು ಹೇಳಿದ್ದರು. ಏಕೆಂದರೆ ಪಂದ್ಯದ ವೇಳೆ ಪಾಸಿಟಿವ್ ಪ್ರಕರಣಗಳು ದಾಖಲಾಗಿ, ನಂತರ ಇಂಗ್ಲೆಂಡ್‌ನಲ್ಲಿ ದೀರ್ಘ ಅವಧಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದರಿಂದ ಸೆ.19 ರಿಂದ ಆರಂಭವಾಗಲಿರುವ 14ನೇ ಐಪಿಎಲ್ ಕೆಲ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಆಟಗಾರರ ಮುಂದಾಲೋಚನೆ ಎಂದು ಅವರು ಹೇಳಿದ್ದಾರೆ ಸಿಇಒ ಟಾಮ್ ಹ್ಯಾರಿಸನ್ ಸ್ಪಷ್ಟಪಡಿಸಿದ್ದಾರೆ.
Advertisement