ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ವಿದಾಯ

ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ ರೌಂಡರ್ ಮೋಯಿನ್ ಅಲಿ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ ಅವರು ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಮುಂದುವರಿಸುತ್ತಾರೆ. ಇದನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಚಿತಪಡಿಸಿದೆ.
ಮೋಯಿನ್ ಅಲಿ
ಮೋಯಿನ್ ಅಲಿ

ಅಬುಧಾಬಿ: ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ ರೌಂಡರ್ ಮೋಯಿನ್ ಅಲಿ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ ಅವರು ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಮುಂದುವರಿಸುತ್ತಾರೆ. ಇದನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಚಿತಪಡಿಸಿದೆ.

"ನನಗೆ ಈಗ 34 ವರ್ಷ ವಯಸ್ಸಾಗಿದೆ ಮತ್ತು ನಾನು ಎಷ್ಟು ಸಾಧ್ಯವೋ ಅಷ್ಟು ಆಡಲು ಮತ್ತು ನನ್ನ ಕ್ರಿಕೆಟ್ ಅನ್ನು ಆನಂದಿಸಲು ಬಯಸುತ್ತೇನೆ" ಎಂದು ಮೋಯಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಅದ್ಭುತವಾದ್ದದ್ದು. ಆ ದೀನ ನಿಮ್ಮದಾಗಿದ್ದರೇ ಬೇರೆ ಎಲ್ಲ ಸ್ವರೂಪಗಳಿಗಿಂತಲೂ ನೀಮಗೆ ಈ ಸ್ವರೂಪದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ" ಎಂದಿದ್ದಾರೆ.

34 ವರ್ಷದ ಆಲ್ ರೌಂಡರ್ ಹೇಳಿದರು, "ನಾನು ನನ್ನ ತಂಡದ ಸಹ ಆಟಗಾರರೊಂದಿಗೆ ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಆಡಿದ್ದೇನೆ. ಮತ್ತು ನಾನು ಟೆಸ್ಟ್ ಕ್ರಿಕೆಟ್ ಆಡುವುದನ್ನು ಕಳೆದುಕೊಳ್ಳುತ್ತೇನೆ. ನನ್ನ ಅತ್ಯುತ್ತಮ ಬೌಲಿಂಗ್ ನಿಂದ ನಾನು ಯಾರನ್ನಾದರೂ ಔಟ್ ಮಾಡಬಹುದು ಎಂದು ತಿಳಿದಿದ್ದೇ. ನಾನು ಬೌಲಿಂಗ್ ದೃಷ್ಟಿಯಿಂದ ಟೆಸ್ಟ್ ಕ್ರಿಕೆಟ್ ಅನ್ನು ಸಹ ನೆನಪಿಸಿಕೊಳ್ಳುತ್ತೇನೆ. ನಾನು ಟೆಸ್ಟ್ ಕ್ರಿಕೆಟ್ ಅನ್ನು ಆನಂದಿಸಿದ್ದೇನೆ" ಎಂದು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ನ ಸ್ಪಿನ್ ಬೌಲರ್ ಆಗಿ ಆಡಿರುವ ಮೊಯೀನ್ 2014 ರಲ್ಲಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದು ಗಮನಾರ್ಹವಾಗಿದೆ. ಅವರು ತಮ್ಮ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಆದರೆ ಮೊಯೀನ್ ತಮ್ಮ ಟೆಸ್ಟ್ ವೃತ್ತಿಜೀವದಲ್ಲಿ 28.29 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 2016 ಅವರಿಗೆ ಸ್ಮರಣೀಯ ವರ್ಷ. ಇದೇ ವರ್ಷದಲ್ಲಿ ಅವರು ತಮ್ಮ ಹೆಸರಿಗೆ ಇನ್ನೂ ನಾಲ್ಕು ಶತಕಗಳನ್ನು ಸೇರಿಸಿದರು.

ಅದರ ನಂತರ ಅವರು ಶತಕ ಗಳಿಸಲಿಲ್ಲ. ಆದರೆ ಅವರು ಚೆಂಡಿನೊಂದಿಗೆ ಪರಿಣಾಮಕಾರಿ ಬೌಲಿಂಗ್ ನಡೆಸಿದರು. 2017 ರಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಪಡೆದ ಅವರು ಇಡೀ ಸರಣಿಯಲ್ಲಿ 25 ವಿಕೆಟ್ ಕಬಳಿಸಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದರು. 2019 ರಲ್ಲಿ, ಅವರನ್ನು ಕೇಂದ್ರ ಒಪ್ಪಂದ ಮಾಡಿಕೊಂಡ ಟೆಸ್ಟ್ ಆಟಗಾರರ ಪಟ್ಟಿಯಿಂದ ಕೈಬಿಡಲಾಯಿತು, ನಂತರ ಅವರು ಟೆಸ್ಟ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡರು. ಮೊಯೀನ್ 64 ಟೆಸ್ಟ್ ಪಂದ್ಯಗಳಲ್ಲಿ 2914 ರನ್ ಮತ್ತು 195 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com