ಸ್ಮೃತಿ ಮಂದಾನ
ಸ್ಮೃತಿ ಮಂದಾನ

ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಟೆಸ್ಟ್ ಕ್ರಿಕೆಟ್: ಸ್ಮೃತಿ ಮಂದಾನ ಅಜೇಯ 80 ರನ್, ಮೊದಲ ದಿನದಾಟದ ಅಂತ್ಯಕ್ಕೆ ಭಾರತ 132/1

ಸ್ಮೃತಿ ಮಂದಾನ ವೃತ್ತಿ ಜೀವನದ ಅಜೇಯ 80 ರನ್ ಗಳೊಂದಿಗೆ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ.

ಗೋಲ್ಡ್ ಕೋಸ್ಟ್: ಸ್ಮೃತಿ ಮಂದಾನ ವೃತ್ತಿ ಜೀವನದ ಅಜೇಯ 80 ರನ್ ಗಳೊಂದಿಗೆ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ.

ಮಂದಾನ ಒಂದು ಸಿಕ್ಸರ್, 15 ಬೌಂಡರಿಗಳೊಂದಿಗೆ 144 ಎಸತೆಗಳಲ್ಲಿ 80 ರನ್ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಫಾಲಿ ವರ್ಮಾ 64 ಎಸೆತಗಳಲ್ಲಿ 34 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 93 ರನ್ ಬಂದಿತ್ತು. ಆದರೆ, ಶಫಾಲಿ ವರ್ಮಾ ಮೆಗ್ರಾ ಅವರಿಗೆ ಕ್ಯಾಚ್ ನೀಡಿ ಫೆವಿಲಿಯನ್ ಗೆ ಮರಳಿದರು.

ನಂತರ ಪೂನಂ ರಾವತ್ ಜೊತೆಗೂಡಿದ ಸ್ಮೃತಿ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರೆಸಿದರು. 35ನೇ ಓವರ್ ನಲ್ಲಿ ತಂಡದ ಮೊತ್ತ ಮೂರಂಕಿ ದಾಟಿತ್ತು. ಬೋಜನ ವಿರಾಮದ ನಂತರ ಏಳನೇ ಓವರ್  ವೇಳೆ ಮಳೆ ಕಾಡಿತು. ಎರಡನೇ ಅವಧಿಯಲ್ಲಿ ಪದೇ ಪದೇ ಮಳೆ ಕಾಡಿತು.

ಮಳೆಯಿಂದಾಗಿ ಪಂದ್ಯ ರದ್ದಾಗುವ ಮುನ್ನ ಪೂನಂ ರಾವತ್ ಅವರೊಂದಿಗಿನ ಮುರಿಯದ ಜೊತೆಯಾಟದಿಂದ 39 ರನ್ ಸೇರ್ಪಡೆಯಾಯಿತು. ಸ್ಮೃತಿ ಜೀವನಶ್ರೇಷ್ಠ 80 ರನ್ ಗಳಿಸಿ ಅಜೇಯರಾಗಿ ಉಳಿದರು. 

Related Stories

No stories found.

Advertisement

X
Kannada Prabha
www.kannadaprabha.com