ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ವಿಜೇತರಿಗೆ ಟ್ರೋಫಿಯೊಂದಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ: ಐಸಿಸಿ

ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವಿಜೇತರಾದವರಿಗೆ ಚಾಂಪಿಯನ್ ಶಿಫ್ ಟ್ರೋಫಿಯೊಂದಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್  ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ತಿಳಿಸಿದೆ.
ಐಸಿಸಿ ಲೊಗೋ
ಐಸಿಸಿ ಲೊಗೋ

ದುಬೈ: ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವಿಜೇತರಾದವರಿಗೆ ಚಾಂಪಿಯನ್ ಶಿಫ್ ಟ್ರೋಫಿಯೊಂದಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್  ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ತಿಳಿಸಿದೆ. ಸೌತಂಪ್ಟನ್ ನಲ್ಲಿ ಜೂನ್ 18 ರಂದು ಈ ಪ್ರತಿಷ್ಟಿತ ಪ್ರಶಸ್ತಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಲಿವೆ.

ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ವಿಜೇತರಾದವರು, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿಯೊಂದಿಗೆ 1.6 ಮಿಲಿಯನ್ ಡಾಲರ್ ಮೊತ್ತದ ಬಹುಮಾನದ ಹಣವನ್ನು ಪಡೆಯಲಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಒಂಬತ್ತು ತಂಡಗಳ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ತಂಡ 800,000 ಅಮೆರಿಕನ್ ಡಾಲರ್, ಮೂರನೇ ಸ್ಥಾನದ ತಂಡ 450,000 ಅಮೆರಿಕನ್ ಡಾಲರ್ ಹಾಗೂ ನಾಲ್ಕನೇ ಸ್ಥಾನದ ತಂಡ 350,000 ಅಮೆರಿಕನ್ ಡಾಲರ್, ಐದನೇ ಸ್ಥಾನ ಪಡೆದ ತಂಡ 200,000 ಅಮೆರಿಕನ್ ಡಾಲರ್  ಹಣವನ್ನು ಪಡೆದರೆ, ಉಳಿದ ನಾಲ್ಕು ತಂಡಗಳು ತಲಾ 100,000 ಅಮೆರಿಕನ್ ಡಾಲರ್ ಪಡೆಯಲಿವೆ ಎಂದು ಐಸಿಸಿ ಹೇಳಿದೆ.

ಧೀರ್ಘ ಟೆಸ್ಟ್ ಕ್ರಿಕೆಟ್ ನಲ್ಲಿ ಸುಮಾರು 9 ತಂಡಗಳು ಸುಮಾರು ಎರಡು ವರ್ಷಗಳ ಕಾಲ ಸ್ಪರ್ಧಿಸಿವೆ. ಒಂದು ವೇಳೆ ಫೈನಲ್ ಪಂದ್ಯ ಡ್ರಾ ಆದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಸಮಾನವಾಗಿ ಪ್ರಶಸ್ತಿ ಹಣವನ್ನು ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com