ಕೊರೋನಾ ಉಲ್ಬಣ: ಮೂರು ಟಿ 20 ವಿಶ್ವಕಪ್ ಯುರೋಪಿಯನ್ ಅರ್ಹತಾ ಪಂದ್ಯಗಳು ರದ್ದು-ಐಸಿಸಿ ಘೋಷಣೆ

ಮೂರು ಟಿ 20 ವಿಶ್ವಕಪ್ ಸಬ್ ರೀಜನಲ್ ಯುರೋಪ್ ಕ್ವಾಲಿಫೈಯರ್‌ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ 2022 ರ ಪುರುಷರ ವಿಭಾಗದ ಪಾಥ್‌ವೇ ಪಂದ್ಯಾವಳಿಗಳು ಕೋವಿಡ್ 19 ರ ಕಾರಣದಿಂದಾಗಿ ರದ್ದುಗೊಂಡಿವೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಮೂರು ಟಿ 20 ವಿಶ್ವಕಪ್ ಸಬ್ ರೀಜನಲ್ ಯುರೋಪ್ ಕ್ವಾಲಿಫೈಯರ್‌ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ 2022 ರ ಪುರುಷರ ವಿಭಾಗದ ಪಾಥ್‌ವೇ ಪಂದ್ಯಾವಳಿಗಳು ಕೋವಿಡ್ 19 ರ ಕಾರಣದಿಂದಾಗಿ ರದ್ದುಗೊಂಡಿವೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ.

ಫಿನ್ಲ್ಯಾಂಡ್ ತಮ್ಮ ಮೊದಲ ಐಸಿಸಿ ಈವೆಂಟ್ ಅನ್ನು ಮುಂದಿನ ತಿಂಗಳಿನಿಂದ ಸಬ್ ರೀಜನಲ್ ಯುರೋಪ್ ಎ ಮತ್ತು ಬಿ ಅರ್ಹತಾ ಪಂದ್ಯಗಳೊಂದಿಗೆ ಆಯೋಜಿಸಲು ಸಜ್ಜಾಗಿತ್ತು. ಆತಿಥೇಯರಾದ ಜರ್ಮನಿ, ಜಿಬ್ರಾಲ್ಟರ್, ಗ್ರೀಸ್, ಗುರ್ನಸಿ, ಹಂಗೇರಿ, ಲಕ್ಸೆಂಬರ್ಗ್ ಮತ್ತು ಸ್ವೀಡನ್‌ಗಳನ್ನು ಒಳಗೊಂಡ ಯುರೋಪ್ ಬಿ ಕ್ವಾಲಿಫೈಯರ್ ಜೂನ್ 30 ಮತ್ತು ಜುಲೈ 5 ರ ನಡುವೆ ನಡೆಯಲಿತ್ತು. ಜುಲೈ 5 ಮತ್ತು 10 ರ ನಡುವೆ ಬೆಲ್ಜಿಯಂ ಆತಿಥ್ಯ ವಹಿಸಬೇಕಿದ್ದ ಯುರೋಪ್ ಸಿ ಅರ್ಹತಾ ಪಂದ್ಯ ಸಹ ರದ್ದುಗೊಂಡಿದೆ

"ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಮುಂದಿನ ತಿಂಗಳು ಪ್ರಾರಂಭವಾಗಲಿರುವ ಮೂರು ಟಿ 20 ವಿಶ್ವಕಪ್ ಉಪ ಪ್ರಾದೇಶಿಕ ಯುರೋಪ್ ಅರ್ಹತಾ ಪಂದ್ಯಗಳನ್ನು ರದ್ದುಗೊಳಿಸಬೇಕಾಗಿದೆ" ಎಂದು ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ರ್ಬಂಧಗಳು ಮತ್ತು ಯುರೋಪಿಯನ್ ಋತುಮಾನವು ಸಧ್ಯದ ಮಟ್ಟಿಗೆ ಪಂದ್ಯಗಳನ್ನು ರದ್ದುಗೊಳಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳನ್ನಿಟ್ಟಿಲ್ಲ. . "

2022 ಟಿ 20 ವಿಶ್ವಕಪ್ ಹಾದಿಯಲ್ಲಿನ ಇತರ ಎರಡು ಇವೆಂಟ್ ಗಳನ್ನು ಸಹ ಮುಂದೂಡಲಾಗಿದೆ. ಜುಲೈ 17 ಮತ್ತು 23 ರ ನಡುವೆ ಕೆನಡಾದಲ್ಲಿ ನಡೆಯಲಿದ್ದ 20 ವಿಶ್ವಕಪ್ ಅಮೆರಿಕಾಸ್ ಕ್ವಾಲಿಫೈಯರ್ ಸಹ ಮುಂದೂಡಿಕೆಯಾಗಿದೆ. ಹೊಸ ದಿನಾಂಕಗಳು ಮತ್ತು ಆತಿಥೇಯ ದೇಶವನ್ನು ಸರಿಯಾದ ಸಮಯದಲ್ಲಿ ಖಚಿತಪಡಿಸಲಾಗುತ್ತದೆ. ಜುಲೈ 11 ಮತ್ತು 17 ರ ನಡುವೆ ಮಲೇಷ್ಯಾದಲ್ಲಿ ನಡೆಯಲಿದ್ದ ಭೂತಾನ್, ಚೀನಾ, ಮಲೇಷ್ಯಾ, ಮ್ಯಾನ್ಮಾರ್, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ ಒಳಗೊಂಡ ಏಷ್ಯಾ ಬಿ ಕ್ವಾಲಿಫೈಯರ್ ಅನ್ನು ಸಹ ಮುಂದೂಡಿಕೆಯಾಗಿದೆ. ಇದಲ್ಲದೆ, ಮಲೇಷ್ಯಾ ಆಯೋಜಿಸಿರುವ ಮಹಿಳಾ ಟಿ 20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ನವೆಂಬರ್ 22-28ರ ನಡುವೆ ಹೊಸ ದೃಢಪಡಿಸಿರುವ ದಿನಾಂಕಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com