ಟಿಮ್ ಸೀಫರ್ಟ್
ಟಿಮ್ ಸೀಫರ್ಟ್

ಕೆಕೆಆರ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಗೆ ಕೊರೋನಾ ದೃಢ

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಅವರಿಗೆ  ಕೋವಿಡ್ -19 ಸೋಂಕು ದೃಢವಾಗಿದೆ. ಸಧ್ಯ ಅವರೀಗ ನ್ಯೂಜಿಲೆಂಡ್‌ನ ಐಪಿಎಲ್ ಆಟಗಾರರೊಂದಿಗೆ ಸ್ವದೇಶಕ್ಕೆ ತೆರಳುತ್ತಿಲ್ಲ ಎಂದು ದೇಶದ ಕ್ರಿಕೆಟ್ ಮಂಡಳಿಯ ಪ್ರಕಟಣೆ ಶನಿವಾರ ತಿಳಿಸಿದೆ.

ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಅವರಿಗೆ  ಕೋವಿಡ್ -19 ಸೋಂಕು ದೃಢವಾಗಿದೆ. ಸಧ್ಯ ಅವರೀಗ ನ್ಯೂಜಿಲೆಂಡ್‌ನ ಐಪಿಎಲ್ ಆಟಗಾರರೊಂದಿಗೆ ಸ್ವದೇಶಕ್ಕೆ ತೆರಳುತ್ತಿಲ್ಲ ಎಂದು ದೇಶದ ಕ್ರಿಕೆಟ್ ಮಂಡಳಿಯ ಪ್ರಕಟಣೆ ಶನಿವಾರ ತಿಳಿಸಿದೆ.

ಪ್ರಸ್ತುತ ಅಹಮದಾಬಾದ್‌ನಲ್ಲಿರುವ ಸೀಫರ್ಟ್ ಅವರನ್ನು ಚೆನ್ನೈಗೆ ಸ್ಥಳಾಂತರಿಸಲಾಗುವುದು, ಅಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ,

"ಟಿಮ್ ಸೀಫರ್ಟ್ ಕೋವಿಡ್-19 ಪಾಸಿಟಿವ್ ವರದಿ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ್ದ ನ್ಯೂಜಿಲೆಂಡ್‌ನ ಇತರೆ ಆಟಗಾರರು, ಸಿಬ್ಬಂದಿ ಮತ್ತು ಕಮೆಂಟೇರಿಯನ್ ಗಳೊಂದಿಗೆ ಚಾರ್ಟರ್ ಫ್ಲೈಟ್ ನಲ್ಲಿ ನ್ಯೂಜಿಲೆಂಡ್‌ಗೆ ಹಿಂದಿರುಗುವುದಿಲ್ಲ" ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಹೇಳಿಕೆ ತಿಳಿಸಿದೆ.

"ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ ಸೀಫರ್ಟ್, ನಿರ್ಗಮನಕ್ಕೆ ಮುಂಚಿನ ಪಿಸಿಆರ್ ಪರೀಕ್ಷೆಗಳಲ್ಲಿ ವಿಫಲರಾದರು ಮತ್ತು ಇದರ ಪರಿಣಾಮವಾಗಿ ಕ್ವಾರಂಟೈನ್ ನಲ್ಲಿರಲಿದ್ದಾರೆ. ಅವರಿಗೆ ಮಧ್ಯಮ ಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಂಡಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೆಕೆಆರ್ ನ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್ ನಂತರ ಕೋವಿಡ್ ಸೋಂಕಿಗೆ ಒಳಗಾದ ತಂಡದ ಮೂರನೇ ಆಟಗಾರ ಸೀಫರ್ಟ್ ಅವರಾಗಿದ್ದಾರೆ, ಇದಕ್ಕೆ ಮುನ್ನ ಚಕ್ರವರ್ತಿ ಮತ್ತು ವಾರಿಯರ್ ಈ ವಾರದ ಪ್ರಾರಂಬದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು,ಚೆನ್ನೈ ಸೂಪರ್ ಕಿಂಗ್ಸ್ (ಮೈಕೆಲ್ ಹಸ್ಸಿ ಮತ್ತು ಎಲ್ ಬಾಲಾಜಿ), ದೆಹಲಿ ಕ್ಯಾಪಿಟಲ್ಸ್ (ಅಮಿತ್ ಮಿಶ್ರಾ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ವೃದ್ಧಿಮಾನ್ ಸಹ) ತಂಡಗಳಲ್ಲಿ ಸಹ ಹೆಚ್ಚಿನ ಪ್ರಮಾಣದ ಕೋವಿಡ್ ಸೋಂಕು ಕಾಣಿಸಿದೆ. ಹಾಗಾಗಿ ಈ ಬಾರಿಯ ಐಪಿಎಲ್ ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು.

Related Stories

No stories found.

Advertisement

X
Kannada Prabha
www.kannadaprabha.com