ಜನಾಂಗೀಯ ನಿಂದನೆ ವಿವಾದ: ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ಯಾರ್ಕ್‌ಷೈರ್ ಗೆ ನಿರ್ಬಂಧ! 

ಜನಾಂಗೀಯ ನಿಂದನೆ ವಿವಾದವನ್ನು ನಿಭಾಯಿಸುವಲ್ಲಿ ಎಡವಿದ ಯಾರ್ಕ್ ಷೈರ್ ಗೆ ಇಂಗ್ಲೆಂಡ್ ತಂಡವನ್ನೊಳಗೊಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯಳನ್ನೂ ನಡೆಸದಂತೆ ಯಾರ್ಕ್ ಷೈರ್ ಗೆ ನಿರ್ಬಂಧ ವಿಧಿಸಲಾಗಿದೆ.
ಯಾರ್ಕ್‌ಷೈರ್ ನ ಆಟಗಾರ ರಫೀಕ್
ಯಾರ್ಕ್‌ಷೈರ್ ನ ಆಟಗಾರ ರಫೀಕ್

ಲಂಡನ್: ಜನಾಂಗೀಯ ನಿಂದನೆ ವಿವಾದವನ್ನು ನಿಭಾಯಿಸುವಲ್ಲಿ ಎಡವಿದ ಯಾರ್ಕ್ ಷೈರ್ ಗೆ ಇಂಗ್ಲೆಂಡ್ ತಂಡವನ್ನೊಳಗೊಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯಳನ್ನೂ ನಡೆಸದಂತೆ ಯಾರ್ಕ್ ಷೈರ್ ಗೆ ನಿರ್ಬಂಧ ವಿಧಿಸಲಾಗಿದೆ.

ಇಂಗ್ಲೆಂಡ್ ಹಾಗೂ ವ್ಹೇಲ್ಸ್ ಕ್ರಿಕೆಡ್ ಮಂಡಳಿ ಯಾರ್ಕ್ ಷೈರ್  ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಜನಾಂಗೀಯ ನಿಂದನೆ ವಿವಾದವನ್ನು ನಿಭಾಯಿಸಿರುವುದು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. 

ಪಾಕಿಸ್ತಾನ ಮೂಲದ ಸ್ಪಿನ್ನರ್, ಮಾಜಿ ಆಟಗಾರ ಅಜೀಮ್ ರಫೀಕ್ ಆಂಗ್ಲರ ರಾಷ್ಟ್ರದ ವಿರುದ್ಧ ಜನಾಂಗೀಯ ನಿಂದನೆ ಆರೋಪವನ್ನು ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾರ್ಕ್ ಷೈರ್ ರಫೀಕ್ ಗೆ ಕ್ಷಮೆ ಕೇಳಿತ್ತು.

ಆದರೆ ಈ ಘಟನೆಗೆ ಸಂಬಂಧಿಸಿದಂತೆ ಕಳೆದ ವಾರ ಪ್ರತಿಕ್ರಿಯೆ ನೀಡಿದ್ದ ಯಾರ್ಕ್ ಷೈರ್ ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿರುವ ಸಿಬ್ಬಂದಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ನಡೆ ಯಾರ್ಕ್ ಷೈರ್ ಕ್ರಿಕೆಟ್ ಕ್ಲಬ್ ವಿರುದ್ಧ ಸ್ಪಾನ್ಸರ್ ಗಳು, ಕಿಟ್ ತಯಾರಕರಿಂದಲೂ ತೀವ್ರವಾದ ಆಕ್ಷೇಪ, ಟೀಕೆಗಳಿಗೆ ಕಾರಣವಾಗಿದ್ದವು.

ಈಗ ಇಸಿಬಿ ಇಂಗ್ಲೆಂಡ್ ನ ಕ್ರಿಕೆಟ್ ನಿಯಂತ್ರಕ ಮಂಡಳಿ ಯಾರ್ಕ್ ಷೈರ್ ಗೆ ಇಂಗ್ಲೆಂಡ್- ನ್ಯೂಜಿಲ್ಯಾಂಡ್ ನಡುವೆ 2022 ರ ಜೂನ್ ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ನಡೆಸುವುದರಿಂದ ನಿರ್ಬಂಧ ವಿಧಿಸಿದೆ. 

ಯಾರ್ಕ್ ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ನ್ನು ಅಂತಾರಾಷ್ಟ್ರೀಯ ಹಾಗೂ ಪ್ರಮುಖ ಪಂದ್ಯಗಳನ್ನು ನಡೆಸುವುದರಿಂದ ಅಮಾನತುಗೊಳಿಸಲಾಗಿದೆ. ಕ್ಲಬ್ ಗುಣಮಟ್ಟವನ್ನು ಸಾಧಿಸವವರೆಗೂ ಈ ನಿರ್ಬಂಧ ಮುಂದುವರೆಯಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಇದೇ ವೇಳೆ ರಫೀಕ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಗ್ಯಾರಿ ಬ್ಯಾಲೆನ್ಸ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಇಸಿಬಿ ಹೇಳಿದ್ದು, ಆತನನ್ನೂ ಅನಿರ್ದಿಷ್ಟಾವಧಿಗೆ ಇಂಗ್ಲೆಂಡ್ ಆಯ್ಕೆಯಿಂದ ಅಮಾನತುಗೊಳಿಸಲಾಗಿದೆ ಎಂದು ಇಸಿಬಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com