ಹೆಸರಾಂತ ಕ್ರಿಕೆಟ್ ತರಬೇತುದಾರ ತಾರಕ್ ಸಿನ್ಹಾ ನಿಧನ: ಪಂತ್, ಸೆಹ್ವಾಗ್ ಸೇರಿ ಅನೇಕ ಗಣ್ಯರಿಂದ ಸಂತಾಪ
ಖ್ಯಾತ ಕ್ರಿಕೆಟ್ ತರಬೇತುದಾರ ತಾರಕ್ ಸಿನ್ಹಾ ನಿಧನರಾಗಿದ್ದಾರೆ. ಧೀರ್ಘ ಅನಾರೋಗ್ಯದ ನಂತರ ಶನಿವಾರ ಅವರು ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷವಯಸ್ಸಾಗಿತ್ತು. ಬ್ರಹ್ಮಚಾರಿಯಾಗಿದ್ದ ಅವರು, ಸಹೋದರಿ, ನೂರಾರು ಶಿಷ್ಯರು ಹಾಗೂ ಪ್ರೀತಿ ಪಾತ್ರರನ್ನು ಅಗಲಿದ್ದಾರೆ.
Published: 07th November 2021 01:36 PM | Last Updated: 07th November 2021 01:38 PM | A+A A-

ತಾರಕ್ ಸಿನ್ಹಾ, ರಿಷಭ್ ಪಂತ್
ನವದೆಹಲಿ: ಖ್ಯಾತ ಕ್ರಿಕೆಟ್ ತರಬೇತುದಾರ ತಾರಕ್ ಸಿನ್ಹಾ ನಿಧನರಾಗಿದ್ದಾರೆ. ಧೀರ್ಘ ಅನಾರೋಗ್ಯದ ನಂತರ ಶನಿವಾರ ಅವರು ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷವಯಸ್ಸಾಗಿತ್ತು. ಬ್ರಹ್ಮಚಾರಿಯಾಗಿದ್ದ ಅವರು, ಸಹೋದರಿ, ನೂರಾರು ಶಿಷ್ಯರು ಹಾಗೂ ಪ್ರೀತಿ ಪಾತ್ರರನ್ನು ಅಗಲಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಅವರು ಉಸ್ತಾದ್ ಜೀ ಎಂದೇ ಖ್ಯಾತರಾಗಿದ್ದರು. ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ಶಿಖರ್ ಧವನ್ ಸೇರಿದಂತೆ ಸುಮಾರು ಒಂದು ಡಜನ್ ನಷ್ಟು ಆಟಗಾರರು ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಿದ್ದಾರೆ. ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ರುಮೇಲಿ ಧಾರ್ ಮತ್ತಿತರ ಆಟಗಾರರ ಬೆಳವಣಿಗೆಯಲ್ಲೂ ತಾರಕ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
ತಾರಕ ಸಿನ್ಹಾ ಅವರು ನನ್ನ ಮಾರ್ಗದರ್ಶಕ, ತರಬೇತುದಾರ, ಪ್ರೇರಣಾ ಶಕ್ತಿ, ವಿಮರ್ಶಕ ಮತ್ತು ನನ್ನ ಅತ್ಯುನ್ನತ ಅಭಿಮಾನಿಯಾಗಿದ್ದರು. ಅವರು ನನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅವರು ಯಾವಾಗಲೂ ನನ್ನೊಂದಿಗೆ ಇರುತ್ತಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ತಾರಕ್ ಸರ್ ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.
My mentor, coach, motivator, my biggest critic and my greatest fan. You took care of me like your son, I am devastated.You will always be with me whenever I walk out onto the field. My heartfelt condolences & prayers. May your soul rest in peace, Tarak sir. pic.twitter.com/kLE7qlKMXK
— Rishabh Pant (@RishabhPant17) November 6, 2021
ಉಸ್ತಾದ್ ಜಿೀ ಅವರ ನಿಧನದಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಅವರ ಮಾರ್ಗದರ್ಶನದ ಡಜನ್ ನಷ್ಟು ಆಟಗಾರರು ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಿದ್ದಾರೆ. ಆಟಗಾರರಲ್ಲಿ ಅವರು ಬೆಳೆಸಿದ ಮೌಲ್ಯಮಗಳು ಕ್ರಿಕೆಟ್ ಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳುವ ಮೂಲಕ ಅವರ ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
Feel a lot of pain on the demise of passing away of Ustaad ji #TarakSinha .
— Virender Sehwag (@virendersehwag) November 6, 2021
He was one of the rare coaches who gave India more than a dozen Test Cricketers & the values he inculcated in his students helped Indian cricket immensely.Condolences to his family and students. Om Shanti pic.twitter.com/cbd089C8Zb