ಕೋವಿಡ್-19 ಭೀತಿ: ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ರದ್ದು

ಮ್ಯಾಂಚೆಸ್ಟರ್ ನಲ್ಲಿ ಸೆ.10 ರಂದು ಪ್ರಾರಂಭವಾಗಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿನ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದಾಗಿ ರದ್ದುಗೊಂಡಿದೆ.
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ

ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ಸೆ.10 ರಂದು ಪ್ರಾರಂಭವಾಗಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿನ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದಾಗಿ ರದ್ದುಗೊಂಡಿದೆ.

ವಿರಾಟ್ ಕೊಹ್ಲಿ ಹಾಗೂ ತಂಡ ಕೋವಿಡ್-19 ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ್ದರಿಂದಾಗಿ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಂಡಿದೆ.

ಗುರುವಾರ ರಾತ್ರಿ ಭಾರತೀಯ ಆಟಗಾರರಿಗೆ ಬಿಸಿಸಿಐ ಕಳಿಸಿದ್ದ ಸಂದೇಶದಲ್ಲಿ ಪಂದ್ಯವನ್ನಾಡುವಂತೆ ಸೂಚಿಸಿತ್ತಾದರೂ ಕೊನೆಯ ಕ್ಷಣಗಳಲ್ಲಿ ಭಾರತೀಯ ಆಟಗಾರರು ಪಂದ್ಯ ರದ್ದುಗೊಳಿಸಲು ಬಿಗಿ ಪಟ್ಟು ಹಿಡಿದಿದ್ದರಿಂದ ಇಸಿಬಿಯೊಂದಿಗೆ ಚರ್ಚಿಸಿ ಬಿಸಿಸಿಐ ಪಂದ್ಯ ರದ್ದುಗೊಳಿಸುವಂತೆ ಮನವರಿಕೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಇಸಿಬಿ ಅಧಿಕೃತ ಪ್ರಕಟಣೆಯಲ್ಲಿ ಪಂದ್ಯ ರದ್ದುಗೊಳಿಸುತ್ತಿರುವುದಾಗಿ ಘೋಷಿಸಿದೆ. ಬಿಸಿಸಿಐ ನೊಂದಿಗೆ ಸಂವಹನ ನಡೆಸಿದ ಬಳಿಕ ಭಾರತ-ಇಂಗ್ಲೆಂಡ್ ನಡುವಿನ ಎಲ್ ವಿ= ಇನ್ಶ್ಯೂರೆನ್ಸ್ ಟೆಸ್ಟ್ ನ್ನು ರದ್ದುಗೊಂಡಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ ಎಂದು ಇಸಿಬಿ ತಿಳಿಸಿದೆ.

"ಕೋವಿಡ್-19 ಭೀತಿಯಿಂದ ಭಾರತೀಯ ತಂಡದವರು ಮೈದಾನಕ್ಕೆ ಇಳಿಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸಲು ವಿಷಾದ ವ್ಯಕ್ತಪಡಿಸಿದ್ದಾರೆ" ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ತಂಡದ ಆಟಗಾರರಿಗೆ ಆರ್ ಟಿಪಿಸಿ ಆರ್ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿದ್ದರೂ ಫಿಸಿಯೋಥೆರೆಪಿಸ್ಟ್ ಯೋಗೇಶ್ ಪಾರ್ಮಾರ್ ಗೆ ಬುಧವಾರ ಕೋವಿಡ್-19 ಸೋಂಕು ದೃಢಪಟ್ಟಿತ್ತು.

ಇಸಿಬಿಗೆ ಪಂದ್ಯ ರದ್ದುಗೊಳಿಸುವುದಕ್ಕೆ ಒಲವಿರಲಿಲ್ಲ. ವಿಳಂಬವಾದರೂ ಸರಿ ಟೆಸ್ಟ್ ಪಂದ್ಯ ನಡೆಸಬೇಕು ಅಥವಾ ಭಾರತ ತಂಡಕ್ಕೆ ದಂಡವಿಧಿಸುವ ನಿರ್ಧಾರವನ್ನು ಪರಿಗಣಿಸಿತ್ತು. ಇದೇ ವೇಳೆ ಭಾರತ ತಂಡ ಮುಂದಿನ ಬೆಳವಣಿಗೆವರೆಗೂ ಐಸೊಲೇಷನ್ ನಲ್ಲಿರುವುದಕ್ಕೆ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com