ನವದೆಹಲಿ: ತಾಲಿಬಾನ್ ವಶಕ್ಕೆ ಪಡೆದ ನಂತರ ಅಫ್ಘಾನಿಸ್ತಾನದ ಕ್ರಿಕೆಟ್ ಬೋರ್ಡ್ ಉನ್ನತ ಅಧಿಕಾರಿಯನ್ನು ಬದಲಾಯಿಸಲಾಗಿದ್ದು, ಮಹಿಳೆಯರು ಆಡುವುದನ್ನು ನಿರ್ಬಂಧಿಸಲಾಗಿದೆ. ಇದೀಗ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ಭಾಗವಹಿಸಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಹಮೀದ್ ಶಿನ್ವಾರಿ ಅವರನ್ನು ಬದಲಾಯಿಸಿ, ನಸೀಬುಲ್ಲಾ ಹಕ್ಕಾನಿ ಅವರನ್ನು ನೇಮಕ ಮಾಡಲಾಗಿದೆ.
ಅಫ್ಘಾನಿಸ್ತಾನದಲ್ಲಿ ಮುಂದೆ ಕ್ರೀಡೆಗಳ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವಂತೆಯೇ, ಅಕ್ಟೋಬರ್ 17 ರಿಂದ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಆಫ್ಘನ್ ಧ್ವಜವಾಗಿ ತಾಲಿಬಾನ್ ಧ್ವಜವನ್ನು ತಳ್ಳುವ ಸಾಧ್ಯತೆಯನ್ನು ಐಸಿಸಿ ಪರಿಶೀಲಿಸುತ್ತಿದೆ. ಒಂದು ವೇಳೆ ಅಂತಹ ಮನವಿ ಬಂದರೆ ಐಸಿಸಿ ಬೋರ್ಡ್ ನಿರ್ದೇಶಕರು ತಿರಸ್ಕರಿಸುವುದು ಖಚಿತವಾಗಿದೆ.
ತಾಲಿಬಾನ್ ಧ್ವಜದ ಅಡಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಇತರ ರಾಷ್ಟ್ರಗಳು ಸ್ಪರ್ಧಿಸುವ ಯೋಚನೆ ಸ್ಪಷ್ಟವಾಗಿ ತಿಳಿದುಬಂದಿಲ್ಲ, ಈವರೆಗೂ ತಾಲಿಬಾನ್ ಧ್ವಜದ ಅಡಿಯಲ್ಲಿ ಕ್ರಿಕೆಟ್ ಆಡುವ ಯಾವುದೇ ಪ್ರಸ್ತಾವನೆ ಬಂದಿಲ್ಲ, ಅಫ್ಘಾನಿಸ್ತಾನದ ಬೆಳವಣಿಗೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಒಂದು ವೇಳೆ ಐಸಿಸಿ ಆಫ್ಘನ್ ಕ್ರಿಕೆಟ್ ಬೋರ್ಡ್ ನಿಷೇಧಿಸಿದರೂ, ರಶೀದ್ ಖಾನ್ ಅಥವಾ ಮೊಹಮ್ಮದ್ ನಬಿ ಅಂತಹ ಆಟಗಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಶಿನ್ವಾರಿ ಪ್ರಕಾರ, ಕುಖ್ಯಾತ 'ಹಕ್ಕಾನಿ ನೆಟ್ವರ್ಕ್' ನ ತಾಲಿಬಾನ್ ನ ಹೊಸ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಆದೇಶದ ಮೇರೆಗೆ ಕಿರಿಯ ಸಹೋದರ ಅನಸ್ ಹಕ್ಕಾನಿಯವರ ಆಜ್ಞೆಯ ಮೇರೆಗೆ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ನಲ್ಲಿ ಬದಲಾವಣೆ ಮಾಡಲಾಗಿದೆ. ಹಕ್ಕಾನಿ ಆಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ.
Advertisement