ಪಾಕ್ ತಂಡದ ಮಾಜಿ ನಾಯಕ ಆಫ್ರಿದಿಯನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದ ಪಿಸಿಬಿ!

ನಜಮ್ ಸೇಠಿ ನೇತೃತ್ವದ ಪಿಸಿಬಿ ನಿರ್ವಹಣಾ ಸಮಿತಿ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದೆ.
ಶಾಹೀದ್ ಅಫ್ರಿದಿ
ಶಾಹೀದ್ ಅಫ್ರಿದಿ
Updated on

ಇಸ್ಲಾಮಾಬಾದ್: ನಜಮ್ ಸೇಠಿ ನೇತೃತ್ವದ ಪಿಸಿಬಿ ನಿರ್ವಹಣಾ ಸಮಿತಿ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಪಿಸಿಬಿ ಪ್ರಕಾರ, ಅಬ್ದುಲ್ ರಜಾಕ್ ಮತ್ತು ರಾವ್ ಇಫ್ತಿಕರ್ ಅಂಜುಮ್ ಕೂಡ ಸಮಿತಿಯ ಭಾಗವಾಗಲಿದ್ದಾರೆ. ಹರೂನ್ ರಶೀದ್ ಅವರು ಮಂಡಳಿಯ ಆಡಳಿತ ಸಮಿತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೊಸದಾಗಿ ರಚಿಸಲಾದ ಸಮಿತಿ ಬಗ್ಗೆ ಸಂಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸಿದ ಪಿಸಿಬಿ ಆಡಳಿತ ಸಮಿತಿಯ ಮುಖ್ಯಸ್ಥ ಸೇಥಿ, 'ಸೀಮಿತ ಸಮಯದ ಹೊರತಾಗಿಯೂ, ಅವರು ಬಲವಾದ ಮತ್ತು ಸ್ಪರ್ಧಾತ್ಮಕ ತಂಡವನ್ನು ನಿರ್ಮಿಸಲು ನಮಗೆ ಸಹಾಯ ಮಾಡುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಹೇಳಿದರು.

ತನ್ನ 20 ವರ್ಷಗಳ ಅನುಭವವು ಯಾವಾಗಲೂ ಯುವ ಪ್ರತಿಭೆಗಳನ್ನು ಬೆಂಬಲಿಸಿದೆ ಎಂದು ಅವರು ಆಫ್ರಿದಿಯನ್ನು ಹೊಗಳಿದರು. ಪಾಕಿಸ್ತಾನಕ್ಕೆ ಉತ್ತಮ ಮತ್ತು ಅರ್ಹ ಆಟಗಾರರನ್ನು ಆಯ್ಕೆ ಮಾಡಲು ಮತ್ತು ಮುಂಬರುವ ಸರಣಿಯಲ್ಲಿ ತಂಡದ ಯಶಸ್ಸಿಗೆ ಕೊಡುಗೆ ನೀಡಲು ಅಫ್ರಿದಿ ತಮ್ಮ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಸೇಥಿ ಹೇಳಿದರು.

ಇದೇ ವೇಳೆ ಪಿಸಿಬಿಗೆ ಧನ್ಯವಾದ ಅರ್ಪಿಸಿದ ಅಫ್ರಿದಿ ಜವಾಬ್ದಾರಿಯನ್ನು ನಿಭಾಯಿಸಲು ನಾನು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ ಎಂದು ಹೇಳಿದರು. 'ನಾವು ನಮ್ಮ ಗೆಲುವಿನ ಹಾದಿಗೆ ಮರಳಬೇಕಾಗಿದೆ. ಅರ್ಹತೆ ಮತ್ತು ಕಾರ್ಯತಂತ್ರದ ಆಯ್ಕೆ ನಿರ್ಧಾರಗಳ ಮೂಲಕ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಾವು ಬಲವಾದ ಪ್ರದರ್ಶನವನ್ನು ನೀಡಲು ಮತ್ತು ನಮ್ಮ ಅಭಿಮಾನಿಗಳ ವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದು ಅವರು ಹೇಳಿದರು.

ಶಾಹಿದ್ ಅಫ್ರಿದಿ 1996ರಿಂದ 2018ರವರೆಗೆ 27 ಟೆಸ್ಟ್, 398 ಏಕದಿನ ಮತ್ತು 99 ಟಿ20ಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 11,196 ರನ್ ಗಳಿಸಿದ್ದಾರೆ. ಅಲ್ಲದೆ 541 ವಿಕೆಟ್ಗಳನ್ನು ಪಡೆದಿದ್ದಾರೆ. 83 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡದ ನಾಯಕತ್ವವನ್ನೂ ವಹಿಸಿದ್ದರು. 2009ರಲ್ಲಿ ರಾಷ್ಟ್ರೀಯ ತಂಡ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com