'ಪಂದ್ಯ ಪುರುಷೋತ್ತಮ ಟ್ರೋಫಿ ಸೇರಬೇಕಾದ್ದು ನಿಮಗಲ್ಲ' ಎಂದ ಟ್ವಿಟರ್ ಟ್ರೋಲ್ ಗೆ ಆರ್.ಅಶ್ವಿನ್ ತೀಕ್ಷ್ಣ ಪ್ರತಿಕ್ರಿಯೆ

ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಐಯ್ಯರ್ ನೆರವಿನಿಂದ ಭಾರತ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 
ಆರ್. ಅಶ್ವಿನ್
ಆರ್. ಅಶ್ವಿನ್

ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಐಯ್ಯರ್ ನೆರವಿನಿಂದ ಭಾರತ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 

ಅಶ್ವಿನ್ ಅವರ ಕ್ಯಾಚ್ ನ್ನು ಮೊಮಿನುಲ್ ಹಕ್ ಕೈ ಚೆಲ್ಲಿದ್ದು ಬಾಂಗ್ಲಾಗೆ ದುಬಾರಿಯಾಯಿತು. ಪರಿಣಾಮ ಅಜೇಯ 42 ರನ್ ಗಳಿಸಿ ಶ್ರೇಯಸ್ ಐಯ್ಯರ್ ಜೊತೆಗಿನ 71 ರನ್ ಗಳ ಜೊತೆಯಾಟ ಭಾರತಕ್ಕೆ ಗೆಲ್ಲಲು ಸಾಧ್ಯವಾಯಿತು.


 ಪಂದ್ಯದ ಬಳಿಕ ಶ್ರೀಲಂಕಾದ ವ್ಯಕ್ತಿಯೋರ್ವ ಟ್ವೀಟ್ ಮಾಡಿ, ಪಂದ್ಯದ ನಿರ್ಣಾಯಕ ಹಂತದಲ್ಲಿ ತಮ್ಮ ಕ್ಯಾಚ್ ನ್ನು ಕೈಚೆಲ್ಲಿದ ಬಾಂಗ್ಲಾದೇಶದ ಮೊಮಿನುಲ್ ಹಕ್ ಗೆ ಅಶ್ವಿನ್ ತಮಗೆ ಲಭಿಸಿದ ಪಂದ್ಯ ಪುರುಷೋತ್ತಮ ಟ್ರೋಫಿಯನ್ನು ನೀಡಬೇಕೆಂದು ಹೇಳಿ ಕಾಲೆಳೆದಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಿನ್ ಓಹ್ ನಿಮ್ಮನ್ನು ಬ್ಲಾಕ್ ಮಾಡಿದ್ದೆ ಎಂದುಕೊಂಡಿದ್ದೆ. ಆದರೆ ಅದು ಬೇರೆಯೋರ್ವ ವ್ಯಕ್ತಿ, ಆತನ ಹೆಸರೇನು? ಹ್ಹಾ ಆತನ ಹೆಸರು ಡೇನಿಯಲ್ ಅಲೆಕ್ಸಾಂಡರ್, ಭಾರತ ಕ್ರಿಕೆಟ್ ಆಡದೇ ಇದ್ದಿದ್ದರೆ, ನೀವಿಬ್ಬರೂ ಏನು ಮಾಡುತ್ತಿದ್ದಿರಿ ಎಂದು ಊಹಿಸಿಕೊಳ್ಳಿ ಎಂದು ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಅಶ್ವಿನ್, ಪಂದ್ಯವನ್ನು ಶ್ರಮದಿಂದ ಗೆಲ್ಲಬೇಕಾಯಿತು, ಬಾಂಗ್ಲಾ ದೇಶ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com