ಸೌತಾಂಪ್ಟನ್: ಇಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಣ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲ್ಲಲು 199 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ 14 ಎಸೆತಗಳಲ್ಲಿ 24 ರನ್ ಗಳಿಸಿದ ರೋಹಿತ್ ಶರ್ಮಾ ಮೊಯಿನ್ ಬೌಲಿಂಗ್ ನಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇಶಾನ್ ಕಿಶಾನ್ 8 ರನ್ ಗಳಿಸಿ ಮೊಯಿನ್ ಬೌಲಿಂಗ್ ನಲ್ಲಿ ಔಟಾದರು.
ದೀಪಕ್ ಹೂಡಾ 33, ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ ಆರು ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ 51 ರನ್ ಗಳಿಸಿದರು. ಅಕ್ಷರ್ ಪಟೇಲ್ 17, ದಿನೇಶ್ ಕಾರ್ತಿಕ್ 11, ಹರ್ಷಲ್ ಪಟೇಲ್ 3 ರನ್ ಗಳಿಸಿ ರನ್ ಔಟಾದರು.
ಇಂಗ್ಲೆಂಡ್ ಪರ ಮೊಯಿನ್ ಆಲಿ, ಜೋರ್ಡಾನ್ ತಲಾ ವಿಕೆಟ್ ಪಡೆದರೆ, ಟೊಪ್ಲಿ, ಮ್ಯಾಥ್ಯೂ ಫರ್ಕಿನ್ ಸನ್ , ಮಿಲ್ಸ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
Advertisement