ಟಿ20 ವಿಶ್ವಕಪ್ ಗ್ರೂಪ್ 'ಬಿ' ಪಂದ್ಯ: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಗೆ 31 ರನ್ ಗಳ ಜಯ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಬಿ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಜಯ ಗಳಿಸಿದೆ. 
ವೆಸ್ಟ್ ಇಂಡೀಸ್ ತಂಡ
ವೆಸ್ಟ್ ಇಂಡೀಸ್ ತಂಡ

ಹೋಬರ್ಟ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಬಿ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಜಯ ಗಳಿಸಿದೆ. 

ಹೋಬರ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. 154 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ 122 ರನ್ ಗಳಿಗೆ ಆಲೌಟ್ ಆಗುವ ಮೂಲಕ 31 ರನ್ ಗಳಿಂದ ಸೋಲು ಕಂಡಿದೆ. 

ವಿಂಡೀಸ್ ಪರ ಕೈಲ್ ಮೇಯರ್ಸ್ 13, ಜಾನ್ಸನ್ ಚಾರ್ಲ್ಸ್ 45, ಎವಿನ್ ಲೆವಿಸ್ 15, ನಿಕೋಲಸ್ ಪೂರನ್ 7, ರೋವ್ಮನ್ ಪೊವೆಲ್ 28 ರನ್ ಪೇರಿಸಿದ್ದಾರೆ. 

ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 27, ರೆಗಿಸ್ ಚಕಬ್ವಾ13, ಟೋನಿ ಮುನಿಯೋಂಗಾ 2, ಸೀನ್ ವಿಲಿಯಮ್ಸ್ 1, ಸಿಕಂದರ್ ರಾಜಾ14, ಮಿಲ್ಟನ್ ಶುಂಬಾ 2, ರಯಾನ್ ಬರ್ಲ್ 17, ಲ್ಯೂಕ್ ಜೊಂಗ್ವೆ 29 ರನ್ ಬಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com