ಟಿ20 ವಿಶ್ವಕಪ್ 2022: ಪಾಕ್ ವಿರುದ್ಧ ಜಿಂಬಾಬ್ವೆಗೆ ಒಂದು ರನ್ ರೋಚಕ ಜಯ!

ಟಿ20 ವಿಶ್ವಕಪ್ 2022 ಪಂದ್ಯದಲ್ಲಿ ಪಾಕ್ ವಿರುದ್ಧ ಜಿಂಬಾಂಬ್ವೆ ತಂಡಕ್ಕೆ ಒಂದು ರನ್ ಗಳ ರೋಚಕ ಜಯ ದೊರೆತಿದೆ. 
ಜಿಂಬಾಬ್ವೆ
ಜಿಂಬಾಬ್ವೆ

ಪರ್ತ್: ಟಿ20 ವಿಶ್ವಕಪ್ 2022 ಪಂದ್ಯದಲ್ಲಿ ಪಾಕ್ ವಿರುದ್ಧ ಜಿಂಬಾಂಬ್ವೆ ತಂಡಕ್ಕೆ ಒಂದು ರನ್ ಗಳ ರೋಚಕ ಜಯ ದೊರೆತಿದೆ. 

ಪರ್ತ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಜಿಬಾಬ್ವೆ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳನ್ನು ಗಳಿಸಿತು. ಸೀನ್ ವಿಲಿಯಮ್ಸ್ 31, ಬ್ರಾಡ್ ಇವನ್ಸ್ 19 ರನ್ ಗಳಿಸಿದರು. 

ಜಿಬಾಬ್ವೆ ನೀಡಿದ 131 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಾಕ್ ತಂಡ 36 ರನ್ ಗಳಿಸುವಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಾನ್ ಮಸೂದ್ 44 ರನ್ ಹಾಗೂ ಮೊಹಮ್ಮದ್ ನವಾಜ್ 22 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ ಜಿಂಬಾಬ್ವೆ ತಂಡದ ಮಾರಕ ಬೌಲಿಂಗ್ ಗೆ ತತ್ತರಿಸಿದ ಪಾಕಿಸ್ತಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಪಾಕ್ ತಂಡವು ಕೇವಲ ಒಂದು ರನ್ ಗಳಿಂದ ಸೋಲು ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com