ರಾಜಸ್ಥಾನ್ ರಾಯಲ್ಸ್ ಮಾಲಿಕರು ನನಗೆ ಮೂರ್ನಾಲ್ಕು ಬಾರಿ ಕಪಾಳ ಮೋಕ್ಷ ಮಾಡಿದ್ದರು: ರಾಸ್ ಟೇಲರ್ ಸ್ಫೋಟಕ ಹೇಳಿಕೆ
ನ್ಯೂಜಿಲ್ಯಾಂಡ್ ನ ಕ್ರಿಕೆಟಿಗ ರಾಸ್ ಟೇಲರ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲಿ 2011 ರ ಐಪಿಎಲ್ ಸೀಸನ್ ನಲ್ಲಿ ತಮಗೆ ಆದ ಅನುಭವವನ್ನು ಬಹಿರಂಗಪಡಿಸಿದ್ದಾರೆ.
Published: 14th August 2022 01:29 AM | Last Updated: 02nd November 2022 11:30 AM | A+A A-

ರಾಸ್ ಟೇಲರ್
ನವದೆಹಲಿ: ನ್ಯೂಜಿಲ್ಯಾಂಡ್ ನ ಕ್ರಿಕೆಟಿಗ ರಾಸ್ ಟೇಲರ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲಿ 2011 ರ ಐಪಿಎಲ್ ಸೀಸನ್ ನಲ್ಲಿ ತಮಗೆ ಆದ ಅನುಭವವನ್ನು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲಿಕರ ಪೈಕಿ, ಓರ್ವ ತಮಗೆ 3-4 ಬಾರಿ ಕಪಾಳ ಮೋಕ್ಷ ಮಾಡಿದ್ದರು ಎಂಬ ಅಘಾತಕಾರಿ ಅಂಶ ಬಹಿರಂಗಪಡಿಸಿದ್ದಾರೆ.
"ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಡಕ್ ಔಟ್ ಆದ ಬೆನ್ನಲ್ಲೇ ಫ್ರಾಂಚೈಸಿ ಮಾಲಿಕರೊಬ್ಬರು ಕಪಾಳಮೋಕ್ಷ ಮಾಡಿದ್ದರು ಎಂದು ಟೇಲರ್ ತಮ್ಮ ಹೊಸ ಆತ್ಮಚರಿತ್ರೆ "ರಾಸ್ ಟೇಲರ್; ಬ್ಲಾಕ್&ವೈಟ್" ನಲ್ಲಿ ದಾಖಲಿಸಿದ್ದಾರೆ.
195 ರನ್ ಗಳ ಚೇಸಿಂಗ್ ಸವಾಲು ಇತ್ತು, ನಾನು ಎಲ್ ಬಿಡಬ್ಲ್ಯುಗೆ ಡಕ್ ಔಟ್ ಆದೆ, ನಾವು ಗುರಿಯ ಸಮೀಪ ಹೋಗಲು ಸಾಧ್ಯವಾಗಲಿಲ್ಲ ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
"ಪಂದ್ಯದ ಬಳಿಕ ಹೋಟೆಲ್ ನ ಟಾಪ್ ಫ್ಲೋರ್ ನಲ್ಲಿದ್ದ ರಾಯಲ್ ಚಾಲೆಂಜರ್ಸ್ ನ ಮಾಲಿಕರ ಪೈಕಿ ಓರ್ವರು, " ರಾಸ್ ಟೇಲರ್ ನಾವು ನಿಮಗೆ ಡಕ್ ಔಟ್ ಆಗುವುದಕ್ಕಾಗಿ ಮಿಲಿಯನ್ ಡಾಲರ್ಸ್ ಹಣ ನೀಡಿಲ್ಲ ಎಂದು 3-4 ಬಾರಿ ಕಪಾಳ ಮೋಕ್ಷ ಮಾಡಿದ್ದರು" ಎಂದು ಪುಸ್ತಕದಲ್ಲಿ ಬರೆದಿದ್ದಾರೆ.