ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯ: ಇಶಾನ್ ಕಿಶಾನ್, ಕೊಹ್ಲಿ ಅಬ್ಬರ; 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿದ ಭಾರತ
ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್ ಕಿಶಾನ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಜೊತೆಯಾಟದಿಂದ ಭಾರತ ತಂಡ ಬೃಹತ್ ಪ್ರಮಾಣದ ರನ್ ಗಳಿಸಿದೆ. ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಕಲೆ ಹಾಕಿದೆ.
Published: 10th December 2022 03:57 PM | Last Updated: 10th December 2022 04:35 PM | A+A A-

ವಿರಾಟ್ ಕೊಹ್ಲಿ, ಇಶಾನ್ ಕಿಶಾನ್
ಚಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್ ಕಿಶಾನ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಜೊತೆಯಾಟದಿಂದ ಭಾರತ ತಂಡ ಬೃಹತ್ ಪ್ರಮಾಣದ ರನ್ ಗಳಿಸಿದೆ. ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಕಲೆ ಹಾಕಿದೆ.
ಇಲ್ಲಿನ ಚೌಧರಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಇಶಾನ್ ಕಿಶಾನ್ 131 ಎಸೆತಗಳಲ್ಲಿ 210 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 113 ರನ್ ಗಳಿಸಿದರು. ಶಿಖರ್ ಧವನ್ ಔಟ್ ಆದ ನಂತರ ಜೊತೆಯಾದ ಈ ಇಬ್ಬರು ಆಟಗಾರರು ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಎರಡನೇ ವಿಕೆಟ್ ನಲ್ಲಿ 290 ರನ್ ಗಳಿಸಿದರು.
Ishan Kishan becomes fastest double centurion in ODIs with 210-run knock against Bangladesh
Read @ANI Story | https://t.co/xgaUmgrk2c#ishankishan #INDvsBAN #ODI #ViratKohli