ನೋ ಬಾಲ್ ಎಸೆದು 2 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ನಾಯಕ ಜಸ್ ಪ್ರೀತ್ ಬುಮ್ರಾ, ವಿಡಿಯೋ ವೈರಲ್!
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ವಿಚಿತ್ರ ದಾಖಲೆಯೊಂದನ್ನು ಮಾಡಿದ್ದಾರೆ. ಹೌದು ನೋ ಬಾಲ್ ಎಸೆದು 2 ವಿಕೆಟ್ ಪಡೆದಿದ್ದಾರೆ.
Published: 03rd July 2022 03:37 PM | Last Updated: 03rd July 2022 03:37 PM | A+A A-

ಜಸ್ ಪ್ರೀತ್ ಬುಮ್ರಾ
ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ವಿಚಿತ್ರ ದಾಖಲೆಯೊಂದನ್ನು ಮಾಡಿದ್ದಾರೆ. ಹೌದು ನೋ ಬಾಲ್ ಎಸೆದು 2 ವಿಕೆಟ್ ಪಡೆದಿದ್ದಾರೆ.
ಅದು ಹೇಗೆ ಅಂತೀರಾ... ಬುಮ್ರಾ ಈ ಪಂದ್ಯದಲ್ಲಿ 2 ಓವರ್ ಗಳಲ್ಲಿ ನೋ ಬಾಲ್ ಎಸೆದಿದ್ದರು. ಈ ಹೆಚ್ಚುವರಿ ಎಸೆತಗಳಲ್ಲಿ ಬುಮ್ರಾ ವಿಕೆಟ್ ಪಡೆದಿದ್ದಾರೆ. ಮೂರನೇ ಓವರ್ ನ 6ನೇ ಎಸೆತವನ್ನು ಬುಮ್ರಾ ನೋ ಬಾಲ್ ಎಸೆದಿದ್ದರು. ಹೀಗಾಗಿ ಹೆಚ್ಚುವರಿ ಎಸೆತ ಎಸೆಯಬೇಕಾಯಿತು. ಈ ಹೆಚ್ಚುವರಿ ಎಸೆತದಲ್ಲಿ ಅಲೆಕ್ಸ್ ಲೀಸ್ ರನ್ನು ಔಟ್ ಮಾಡಿದರು.
ಇದನ್ನೂ ಓದಿ: 5ನೇ ಟೆಸ್ಟ್: ಎರಡನೇ ದಿನದಾಟಕ್ಕೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 84 ರನ್: 332 ರನ್ ಗಳ ಹಿನ್ನಡೆ!
ನಂತರ 11ನೇ ಓವರ್ ನ ಕೊನೆಯ ಎಸೆತವೂ ನೋಬಾಲ್ ಆಗಿತ್ತು. ಹೀಗಾಗಿ ಬುಮ್ರಾ ಎಸೆದ ಹೆಚ್ಚುವರಿ ಎಸೆತದಲ್ಲಿ ಪೋಪ್ ರನ್ನು ಔಟ್ ಮಾಡಿದರು. ಪೋಪ್ ಚೆಂಡನ್ನು ಡ್ರೈವ್ ಮಾಡಲು ಹೋಗಿದ್ದು ಈ ವೇಳೆ ಚೆಂಡು ಬಾಟ್ ಗೆ ತಾಗಿ ಸ್ಲಿಪ್ ನಲ್ಲಿದ್ದ ಶ್ರೇಯಸ್ ಅಯ್ಯರ್ ಗೆ ಕ್ಯಾಚ್ ಹೋಗಿತ್ತು.
ಇನ್ನು ಪಂದ್ಯದಲ್ಲಿ ಬುಮ್ರಾ 3 ವಿಕೆಟ್ ಗಳಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
#Bumrah is completely owning Day 2 and how!
— Sony Sports Network (@SonySportsNetwk) July 2, 2022
3rd Wicket for BOOM BOOM as he gets #OlliePope caught out
Tune in to Sony Six (ENG), Sony Ten 3 (HIN) & Sony Ten 4 (TAM/TEL) - (https://t.co/tsfQJW6cGi)#ENGvINDLIVEonSonySportsNetwork #ENGvIND pic.twitter.com/cUYTGvvSts