ಬರ್ಮಿಗ್ ಹ್ಯಾಮ್: ಶನಿವಾರ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ರಾಜ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಮಾರಕವಾಗಿ ಪರಿಣಮಿಸಿದ ಭಾರತದ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್, ಟಿ-20 ಪವರ್ ಪ್ಲೇನಲ್ಲಿ 500 ಡಾಟ್ ಬಾಲ್ ಗಳನ್ನು ಬೌಲ್ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಅವರನ್ನು ಮೊದಲ ಎಸೆತದಲ್ಲಿಯೇ ಗೋಲ್ಡನ್ ಡಾಕ್ ಮಾಡಿದ 32 ವರ್ಷದ ವೇಗಿ ಭುವನೇಶ್ವರ್ ಕುಮಾರ್ ಭಾರತಕ್ಕೆ ಪರಿಪೂರ್ಣ ಆರಂಭ ನೀಡಿದರು.
ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಪವರ್ ಪ್ಲೇನಲ್ಲಿ 500 ಡಾಟ್ ಬಾಲ್ ಎಸೆದ ಮೊದಲ ಬೌಲರ್ ಎಂಬ ಹೆಗ್ಗಳಿಗೆ ಪಾತ್ರರಾದರು. ವೆಸ್ಟ್ ಇಂಡೀಸ್ ನ ಸ್ಯಾಮುಯೆಲ್ ಬದ್ರಿ 383 ಡಾಟ್ ಬಾಲ್ ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ನ ಥಿಮ್ ಸೌಥಿ 368 ಡಾಟ್ ಬಾಲ್ ಎಸೆತದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
Advertisement