ಟಿ-20 ವಿಶ್ವಕಪ್: ಮತ್ತೆ ಫಾರ್ಮ್ ಗೆ ಮರಳಿದ ಕೆ.ಎಲ್. ರಾಹುಲ್ ಕೊಂಡಾಡಿದ ಗೌತಮ್ ಗಂಭೀರ್!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಎಲ್. ರಾಹುಲ್ ಅವರನ್ನು ಮಾಜಿ ಆಟಗಾರ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ರಾಹುಲ್ ಯಾವಾಗಲೂ ಫಾರ್ಮ್ ನಲ್ಲಿರುವುದಾಗಿ ಹೇಳಿದ್ದಾರೆ.
ಕೆ.ಎಲ್. ರಾಹುಲ್, ಗೌತಮ್ ಗಂಭೀರ್
ಕೆ.ಎಲ್. ರಾಹುಲ್, ಗೌತಮ್ ಗಂಭೀರ್

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಎಲ್. ರಾಹುಲ್ ಅವರನ್ನು ಮಾಜಿ ಆಟಗಾರ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ರಾಹುಲ್ ಯಾವಾಗಲೂ ಫಾರ್ಮ್ ನಲ್ಲಿರುವುದಾಗಿ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಒಂದಂಕಿ ದಾಟಲು ಹೆಣಗಾಡುತ್ತಿದ್ದ ಟೀಂ ಇಂಡಿಯಾ ಪರ ಕೆ. ಎಲ್ ರಾಹುಲ್  ಗಳಿಸಿದ ಅರ್ಧ ಶತಕ ಪಂದ್ಯದ ಗತಿಯನ್ನೇ ಬದಲಾಯಿಸಿತು. 30 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಅವರು ಮತ್ತೆ ಫಾರ್ಮ್ ಗೆ ಮರಳಿದರು. ಇದು ಟೀಂ ಇಂಡಿಯಾಗೂ ಉತ್ತಮ ಸಂಕೇತವಾಗಿದೆ. ಸ್ಟಾರ್ ಸ್ಫೋರ್ಟ್ಸ್ ಶೋ ಕ್ರಿಕೆಟ್ ಲೈವ್ ನಲ್ಲಿ ಮಾತನಾಡಿರುವ ಗೌತಮ್ ಗಂಭೀರ್, ಕೆ.ಎಲ್. ರಾಹುಲ್ ಫಾರ್ಮ್ ನಲ್ಲಿ ಇಲ್ಲ ಎಂಬ ಊಹೆಗಳನ್ನು ಅಲೆಗಳೆದರು. ಆರಂಭಿಕ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಅವರ ಬೆಂಬಲ ಎಷ್ಟು ಅಗತ್ಯ ಎಂಬುದುನ್ನು ತಿಳಿಸಿದರು.

ಬ್ರಿಸ್ಬೆನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿದಾಗಲೂ ಎಲ್ಲರೂ ಕ್ರೇಜಿಯಾಗಿದ್ದರು. ಬಹುಶಃಅವರು ಈ ವಿಶ್ವಕಪ್ ಅನ್ನು ಬೆಳಗಿಸಲಿದ್ದಾರೆ. ಕೆಟ್ಟ ಇನ್ನಿಂಗ್ಸ್ ನಿಮ್ಮನ್ನು ಕೆಟ್ಟ ಆಟಗಾರನನ್ನಾಗಿ ಅಥವಾ ಶ್ರೇಷ್ಠ ಆಟಗಾರನನ್ನಾಗಿ ಮಾಡುವುದಿಲ್ಲ. ಆದ್ದರಿಂದ, ನೀವು ಬಹುಶಃ ಹೆಚ್ಚು ಸಮತೋಲಿತವಾಗಿರಬೇಕು.  ಒಂದು ಹೊಡೆತವು ಬಹುಶಃ ಎಲ್ಲವನ್ನೂ ಬದಲಾಯಿಸಿತು. ಅವರು ಫಾರ್ಮ್‌ಗೆ ಮರಳಿದ್ದಾರೆ ಮತ್ತು ಅವರು ಯಾವಾಗಲೂ ಫಾರ್ಮ್‌ನಲ್ಲಿದ್ದರು ಎಂದರು.

ಕೆ.ಎಲ್. ರಾಹುಲ್ ಇದೇ ಫಾರ್ಮ್ ಮುಂದುವರೆಸಬಹುದು.  ಅದು ಸಾಧ್ಯವಾದಷ್ಟು ಆಕ್ರಮಣಕಾರಿಯಾಗಿರಬಹುದು, ಏಕೆಂದರೆ ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ, ಅವರು ಆಡ ಬಯಸುವ ರೀತಿಯಲ್ಲಿ, ಅವರನ್ನು ಅವರೇ ತಡೆಯಬಹುದು ಎಂದು ಗೌತಮ್ ಗಂಭೀರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com