ಶ್ರೀಲಂಕಾ ಆಟಗಾರ ಚಮಿಕಾ ಕರುಣಾರತ್ನೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಒಂದು ವರ್ಷ ಅಮಾನತು
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಆಟಗಾರರ ಒಪ್ಪಂದದ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಅಮಾನತುಪಡಿಸಿದೆ.
Published: 23rd November 2022 11:59 PM | Last Updated: 25th November 2022 02:57 PM | A+A A-

ಚಮಿಕಾ ಕರುಣಾರತ್ನೆ
ಕೊಲಂಬೊ: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಆಟಗಾರರ ಒಪ್ಪಂದದ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಅಮಾನತುಪಡಿಸಿದೆ.
ಕರುಣಾರತ್ನೆ ಹೇಗೆ ಹಲವು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಶ್ರೀಲಂಕಾ ಕ್ರಿಕೆಟ್ ಹೆಚ್ಚು ವಿವರಿಸಿಲ್ಲ ಆದರೆ, ತನ್ನ ವಿರುದ್ಧದ ಎಲ್ಲಾ ಆರೋಪಿಗಳಿಗೆ ತಪ್ಪೊಪ್ಪಿಕೊಂಡಿದ್ದು, 5,000 ಡಾಲರ್ ದಂಡವನ್ನೂ ವಿಧಿಸಲಾಗಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖಾ ಸಮಿತಿಯ ಸಂಶೋಧನೆಗಳು ಮತ್ತು ಶಿಫಾರಸುಗಳ ನಂತರ, ಎಸ್‌ಎಲ್‌ಸಿಯ ಕಾರ್ಯಕಾರಿ ಸಮಿತಿಯು ಎಲ್ಲಾ ಪ್ರಕಾರದ ಕ್ರಿಕೆಟ್‌ನಲ್ಲಿ ಭಾಗವಹಿಸದಂತೆ ಒಂದು ವರ್ಷ ನಿಷೇಧಿಸಲಾಗಿದೆ ಮತ್ತು ಒಂದು ವರ್ಷದ ಅವಧಿಗೆ ಅಮಾನತುಗೊಳಿಸಲಾಗುತ್ತದೆ ಎಂದು ಎಸ್‌ಎಲ್‌ಸಿ ತಿಳಿಸಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪ: ಶ್ರೀಲಂಕಾ ಕ್ರಿಕೆಟ್ ತಂಡದಿಂದ ಧನುಷ್ಕಾ ಗುಣತಿಲಕ ಅಮಾನತು
ಕರುಣಾರತ್ನೆ ಮಾಡಿದ ಉಲ್ಲಂಘನೆಗಳ ಗಂಭೀರತೆ ಪರಿಗಣಿಸಿ, ಆತನ ಕ್ರಿಕೆಟ್ ಭವಿಷ್ಯದ ಮೇಲೆ ಪರಿಣಾಮ ಬೀರದಂತೆ ಮತ್ತು ಮುಂದೆ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಬೇಕಾಗಿದೆ ಎಂದು ತನಿಖಾ ಸಮಿತಿಯು ತನ್ನ ವರದಿಯಲ್ಲಿ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಿತ್ತು. ಶ್ರೀಲಂಕಾ ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಎಸ್‌ಎಲ್‌ಸಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ.