ಒಂದೇ ಓವರ್‌ನಲ್ಲಿ 43 ರನ್, 7 ಸಿಕ್ಸರ್ ಮೂಲಕ ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ; ವಿಡಿಯೋ ವೈರಲ್!
ಇದುವರೆಗೆ ಯಾವ ಕ್ರಿಕೆಟಿಗನೂ ಮಾಡದ ಸಾಧನೆಯನ್ನು ರುತುರಾಜ್ ಗಾಯಕ್ವಾಡ್ ಮಾಡಿದ್ದಾರೆ. ಮಹಾರಾಷ್ಟ್ರದ ಯುವ ಆರಂಭಿಕ ಆಟಗಾರ ವಿಜಯ್ ಹಜಾರೆ ಟ್ರೋಫಿ 2022 ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್‌ನಲ್ಲಿ ಸತತ 7 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.
Published: 28th November 2022 03:44 PM | Last Updated: 28th November 2022 04:57 PM | A+A A-

ರುತುರಾಜ್ ಗಾಯಕ್ವಾಡ್
ನವದೆಹಲಿ: ಇದುವರೆಗೆ ಯಾವ ಕ್ರಿಕೆಟಿಗನೂ ಮಾಡದ ಸಾಧನೆಯನ್ನು ರುತುರಾಜ್ ಗಾಯಕ್ವಾಡ್ ಮಾಡಿದ್ದಾರೆ. ಮಹಾರಾಷ್ಟ್ರದ ಯುವ ಆರಂಭಿಕ ಆಟಗಾರ ವಿಜಯ್ ಹಜಾರೆ ಟ್ರೋಫಿ 2022 ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್‌ನಲ್ಲಿ ಸತತ 7 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.
ನೋ ಬಾಲ್ ಸೇರಿದಂತೆ 7 ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ. ಒಂದೇ ಓವರ್ ನಲ್ಲಿ ಒಟ್ಟು 43 ರನ್ ಗಳಿಸಲಾಯಿತು. ಇದರೊಂದಿಗೆ ಪಂದ್ಯದಲ್ಲಿ ದ್ವಿಶತಕವನ್ನೂ ಪೂರೈಸಿದರು. ಶಿವ ಸಿಂಗ್ ಎಸೆದ ಇನಿಂಗ್ಸ್ ನ 49ನೇ ಓವರ್ ಗಾಯಕ್ವಾಡ್ ಈ ಸಾಧನೆ ಮಾಡಿದರು.
ಬೌಂಡರಿಗಿಂತಲೂ ಹೆಚ್ಚು ಸಿಕ್ಸರ್ ಸಿಡಿಸಿದ ರುತುರಾಜ್
ರುತುರಾಜ್ 159 ಎಸೆತಗಳಲ್ಲಿ 10 ಬೌಂಡರಿ ಮತ್ತು 16 ಸಿಕ್ಸರ್‌ಗಳ ನೆರವಿನಿಂದ 220 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನು ಮಹಾರಾಷ್ಟ್ರ 50 ಓವರ್‌ಗಳಲ್ಲಿ 330 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. 2007ರ T20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ನ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ್ದರು. ಆದರೆ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಈ ಹಿಂದೆಯೇ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದರು. ಇದೀಗ ಗಾಯಕ್ವಾಡ್ ಒಂದು ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ದಾಖಲೆ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅವರು ಈ ದಾಖಲೆ ಮಾಡಿದ್ದಾರೆ. ಮಹಾರಾಷ್ಟ್ರ ಆರಂಭ ಉತ್ತಮವಾಗಿರಲಿಲ್ಲ. ಮೊದಲಿಗೆ ರಾಹುಲ್ ತ್ರಿಪಾಠಿ 9 ರನ್ ಗೆ ಔಟಾದರು. ನಂತರ ಕಾರ್ತಿಕ್ ತ್ಯಾಗಿ 11 ರನ್ ಗಳಿಸಿ ಔಟಾದರು. ಇದಾದ ನಂತರ ಬವಾನೆ ಮತ್ತು ಕಾಜಿ ಅವರ ವಿಕೆಟ್‌ಗಳು ಕೂಡ ಬೇಗನೆ ಪತನಗೊಂಡವು, ಆದರೆ ರುತುರಾಜ್ ಇನ್ನೊಂದು ತುದಿಯಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯುತ್ತಿದ್ದರು.
DOUBLE-CENTURY!
— BCCI Domestic (@BCCIdomestic) November 28, 2022
Ruturaj Gaikwad finishes with an unbeaten off just 159 balls!
Follow the match https://t.co/cIJsS7QVxK#VijayHazareTrophy | #QF2 | #MAHvUP | @mastercardindia pic.twitter.com/pVRYh4duLk