ಮಗಳ ಅಗಲುವಿಕೆಯ ನೋವಿನಲ್ಲೂ ಪಂದ್ಯ ಆಡಿದ ಕ್ರಿಕೆಟಿಗ ಡೇವಿಡ್ ಮಿಲ್ಲರ್? ವೈರಲ್ ಪೋಸ್ಟ್ ನ ನೈಜತೆ ಏನು..?

ಒಡಿಐ ಟೂರ್ನಿಯ ಹಿನ್ನೆಲೆಯಲ್ಲಿ ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಗೆ  ಸುದ್ದಿಯೊಂದು ಬರ ಸಿಡಿಲಿನಂತೆ ಅಪ್ಪಳಿಸಿದೆ.
ಅಭಿಮಾನಿಯೊಂದಿಗೆ ಡೇವಿಡ್ ಮಿಲ್ಲರ್
ಅಭಿಮಾನಿಯೊಂದಿಗೆ ಡೇವಿಡ್ ಮಿಲ್ಲರ್
Updated on

ರಾಂಚಿ: ಒಡಿಐ ಟೂರ್ನಿಯ ಹಿನ್ನೆಲೆಯಲ್ಲಿ ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಗೆ  ಸುದ್ದಿಯೊಂದು ಬರ ಸಿಡಿಲಿನಂತೆ ಅಪ್ಪಳಿಸಿದೆ.

ಡೇವಿಡ್ ಮಿಲ್ಲರ್ ಹಾಕಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಈಗ ಎಲ್ಲೆಡೆ ವೈರಲ್ ಆಗತೊಡಗಿದ್ದು, ಹಲವು ಊಹಾಪೋಹಗಳಿಗೂ ಕಾರಣವಾಗಿದೆ. 

"ನಿನ್ನ ಅನುಪಸ್ಥಿತಿ ನನ್ನನ್ನು ಬಹಳ ಕಾಡಲಿದೆ, ನೀನು ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೆ. ಯಾವಾಗಲೂ ಸಕಾರಾತ್ಮಕತೆ ನಿನ್ನಲ್ಲಿತ್ತು. ನಿನ್ನ ಜೀವನದಲ್ಲಿ ಬಂದ ಪ್ರತಿ ಸವಾಲುಗಳನ್ನೂ ಎದುರಿಸಿದ್ದೀಯ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸುವುದನ್ನು ನೀನು ನನಗೆ ಹೇಳಿಕೊಟ್ಟೆ, ನಿನ್ನೊಂದಿಗಿನ ಪಯಣ ಅತ್ಯಂತ ಗೌರವಯುತವಾದದ್ದು ನೀನೆಂದರೆ ಅತ್ಯಂತ ಪ್ರೀತಿ, ಆರ್ ಐಪಿ" ಎಂದು ಡೇವಿಡ್ ಮಿಲ್ಲರ್ ಪುಟ್ಟ ಮಗುವಿನೊಂದಿಗೆ ಇದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 

ಇದನ್ನು ಹಲವು ಮಾಧ್ಯಮಗಳು ಡೇವಿಡ್ ಮಿಲ್ಲರ್ಸ್ ಮಗಳು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾಳೆ ಎಂದು ವರದಿ ಮಾಡಿದ್ದವು. ಆದರೆ ವಾಸ್ತವಾಂಶ ಏನೆಂದರೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಬಾಲಕಿ ಡೇವಿಡ್ ಮಿಲ್ಲರ್ಸ್ ಮಗಳಲ್ಲ ಎನ್ನುತ್ತಿವೆ ಫ್ಯಾಕ್ಟ್ ಚೆಕ್ ವರದಿಗಳು ಹೇಳುತ್ತಿವೆ. 

ಫ್ಯಾಕ್ಟ್ ಚೆಕ್ ಪ್ರಕಾರ, ಕ್ಯಾನ್ಸರ್ ನಿಂದ ಸಾವನ್ನಪ್ಪಿರುವ ಬಾಲಕಿ, ಡೇವಿಡ್ ಮಿಲ್ಲರ್ಸ್ ನ ಅಭಿಮಾನಿಯಾಗಿದ್ದು ಆಕೆ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. 

ಅಭಿಮಾನಿಯನ್ನು ಕಳೆದುಕೊಂಡ ದುಃಖದ ನಡುವೆ ಮಿಲ್ಲರ್ ಪಂದ್ಯವಾಡಿದ್ದಾರೆ.ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿತ್ತು. ಆಫ್ರಿಕಾ ನೀಡಿದ 279 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 45.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com