ಭಾರತ ಏಷ್ಯಾ ಕಪ್‌ಗೆ ತೆರಳದಿದ್ದರೆ ಏಕದಿನ ವಿಶ್ವ ಕಪ್‌ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಪಾಕ್ ಬೆದರಿಕೆ

ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಡಲು ಆದ್ಯತೆ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಮಂಗಳವಾರ ತೀವ್ರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ.
ವಿರಾಟ್ ಕೊಹ್ಲಿ ಅವರೊಂದಿಗೆ ಪಾಕಿಸ್ತಾನದ ಆಟಗಾರರ ಸಾಂದರ್ಭಿಕ ಚಿತ್ರ
ವಿರಾಟ್ ಕೊಹ್ಲಿ ಅವರೊಂದಿಗೆ ಪಾಕಿಸ್ತಾನದ ಆಟಗಾರರ ಸಾಂದರ್ಭಿಕ ಚಿತ್ರ

ನವದೆಹಲಿ: ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಡಲು ಆದ್ಯತೆ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಮಂಗಳವಾರ ತೀವ್ರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ.

ಮುಂದಿನ ವರ್ಷ ಏಷ್ಯಾ ಕಪ್  ಆವೃತ್ತಿಯನ್ನು ಪಾಕಿಸ್ತಾನದಲ್ಲಿ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿಯಲ್ಲಿ ನಿರ್ಧರಿಸಲಾಗಿದೆ.  ಷಾ ಕೂಡಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ.

ಮುಂಬೈನಲ್ಲಿ ಬಿಸಿಸಿಐ ಎಜಿಎಂ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯ್ ಶಾ,  ಭಾರತವು ಏಷ್ಯಾ ಕಪ್ ನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ ಎಂದು ಹೇಳಿದರು. ಶಾ ಅವರ ಹೇಳಿಕೆಯ ನಂತರ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ಐಸಿಸಿ ವಿಶ್ವಕಪ್‌ನಿಂದ ಹೊರಬರಲು ಅವರು ಯೋಚಿಸುತ್ತಿರುವುದಾಗಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ನಿಕಟ ಮೂಲಗಳು ಸೂಚಿಸಿವೆ.

ಪಾಕಿಸ್ತಾನ ಭಾರತದಲ್ಲಿ ಆಡದಿದ್ದರೆ ಐಸಿಸಿ ಮತ್ತು ಏಷ್ಯಾಕಪ್ ನಂತಹ ಟೂರ್ನಿಗಳಲ್ಲಿ ವಾಜಿಣ್ಯಾತ್ಮಕವಾಗಿ ನಷ್ಟ ಉಂಟಾಗುವುದನ್ನು ಅರಿತಿರುವ ಪಾಕಿಸ್ತಾನ ಕಠಿಣ ನಿರ್ಧಾರ  ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ. ಭಾರತ 2008ರ ಏಷ್ಯಾಕಪ್ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಪಾಕಿಸ್ತಾನ ಕೊನೆಯದಾಗಿ 2012ರಲ್ಲಿ ಏಕದಿನ ಮತ್ತು ಟಿ-20 ಸರಣಿಗಾಗಿ ಭಾರತಕ್ಕೆ ಆಗಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com