ಏಷ್ಯಾ ಕಪ್: ಬಾಂಗ್ಲಾ ಸೋಲಿಸಿ, 4 ವರ್ಷಗಳ ಹಿಂದಿನ 'ನಾಗಿನ್ ಡ್ಯಾನ್ಸ್'ಗೆ ಸೇಡು ತೀರಿಸಿಕೊಂಡ ಲಂಕಾ ಆಟಗಾರರು! ವಿಡಿಯೋ

ಗುರುವಾರ ನಡೆದ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯ ಮಾಡು ಇಲ್ಲವೇ ಮಡಿ  ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಸೋಲಿಸಿದ ಶ್ರೀಲಂಕಾ ಆಟಗಾರರು, ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ನಾಲ್ಕು ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ.
ಶ್ರೀಲಂಕಾ ಆಟಗಾರರ ನಾಗಿಣಿ ಡ್ಯಾನ್ಸ್
ಶ್ರೀಲಂಕಾ ಆಟಗಾರರ ನಾಗಿಣಿ ಡ್ಯಾನ್ಸ್

ದುಬೈ: ಗುರುವಾರ ನಡೆದ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯ ಮಾಡು ಇಲ್ಲವೇ ಮಡಿ  ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಸೋಲಿಸಿದ ಶ್ರೀಲಂಕಾ ಆಟಗಾರರು, ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ನಾಲ್ಕು ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ.

2018ರಲ್ಲಿ ನಡೆದಿದ್ದ ನಿದಾಸ್ ಟ್ರೋಫಿ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿದ್ದ ಬಾಂಗ್ಲಾದೇಶ ತಂಡದ ಆಟಗಾರರು ನಾಗಿಣಿ ಡ್ಯಾನ್ಸ್ ಮೂಲಕ ಗೇಲಿ ಮಾಡಿದ್ದರು.

ಗುರುವಾರ ನಡೆದ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯಿಂದಲೇ ಬಾಂಗ್ಲಾದೇಶ ತಂಡವನ್ನು ಲಂಕಾ ಹೊರದಬ್ಬಿದೆ. ನಂತರ ಚಮಿಕಾ ಕರುಣಾ ರತ್ನೆ ನೇತೃತ್ವದಲ್ಲಿನ ತಂಡ ನಾಗಿಣಿ ಡ್ಯಾನ್ಸ್ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಸೆಪ್ಟೆಂಬರ್ 4 ರಂದು ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ, ಅಪ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಭಾರತ ಮುಂದಿನ ಸುತ್ತಿಗೆ ಅರ್ಹತೆ ಪಡೆದ 3ನೇ ತಂಡವಾಗಿದ್ದು, 4ನೇ ತಂಡದ ಹೆಸರು ಇನ್ನೂ ತೀರ್ಮಾನವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com