ಏಷ್ಯಾಕಪ್ 2022: ಸುದ್ದಿಗೋಷ್ಠಿಯಲ್ಲಿ "ಸೆಕ್ಸಿ" ಪದ ಬಳಸಲು ರಾಹುಲ್ ದ್ರಾವಿಡ್ ಹಿಂಜರಿದ್ರಾ?

ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಸೂಪರ್ 4 ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ತರಬೇತುದಾರ ರಾಹುಲ್ ದ್ರಾವಿಡ್ ವಿಶ್ವಾಸ ಹೊಂದಿದ್ದಾರೆ. 
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ದುಬೈ: ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಸೂಪರ್ 4 ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ತರಬೇತುದಾರ ರಾಹುಲ್ ದ್ರಾವಿಡ್ ವಿಶ್ವಾಸ ಹೊಂದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಹುಲ್ ದ್ರಾವಿಡ್, ಭಾರತದ ಬೌಲಿಂಗ್ ದಾಳಿ ಗ್ಲಾಮರಸ್ ಆಗಿ ಕಾಣದೇ ಇರಬಹುದು, ಆದರೆ, ಬೌಲರ್ ಗಳು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲಿದ್ದಾರೆ ಎಂದರು. ಇದನ್ನು ವಿವರಿಸಲು ಪ್ರಯತ್ನಿಸುವಾಗ, ಅವರು 'ಆ ಒಂದು ಪದ'ದಲ್ಲಿ ಸಿಲುಕಿಕೊಂಡರು, ಆದರೆ ಅದನ್ನು ಉಚ್ಚರಿಸದೆಯೇ ತ್ವರಿತಗತಿಯಲ್ಲಿ ಸಂದೇಶ ರವಾನಿಸಿದರು.

ಭಾರತದ ವಿರುದ್ಧ ಪಾಕ್ ಬೌಲರ್ ಗಳು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆಯೇ ಎಂಬ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ದ್ರಾವಿಡ್, ಅವರು ಉತ್ತಮ ಬೌಲರ್ ಹೊಂದಿದ್ದಾರೆ ಎಂದು ಒಪ್ಪಿಕೊಂಡರು. ಅಲ್ಲದೇ ತಮ್ಮ ಬೌಲರ್ ಗಳ ದಾಳಿಯನ್ನು ಕೂಡಾ ಸಮರ್ಥಿಸಿಕೊಂಡರು.  

ನಮ್ಮ ವೇಗದ ಬೌಲರ್‌ಗಳ ಬೌಲಿಂಗ್ ವಿಶ್ಲೇಷಣೆ ಕೂಡ ಬಹಳ ಚೆನ್ನಾಗಿತ್ತು. ಹಾಗಾಗಿ ಅವರ ಬೌಲಿಂಗ್ ನ್ನು ಖಂಡಿತವಾಗಿ ಗೌರವಿಸುತ್ತೇನೆ, ಆದರೆ ನಾವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನನಗೆ ತುಂಬಾ ವಿಶ್ವಾಸವಿದೆ" ಎಂದು ಅವರು ಹೇಳಿದರು.

ನಂತರ ಏನೋ ಹೇಳಲು ಮುಂದಾದ ರಾಹುಲ್ ದ್ರಾವಿಡ್ ಹಾಗೆಯೇ ಸುಮ್ಮನಾದರು. ಈ ಪದ ಬಳಸಲು ಬಯಸಿದ್ದೆ, ಆದರೆ ನಾನು ಆ ಪದವನ್ನು ಬಳಸಲಾರೆ, ನನ್ನ ಮನಸ್ಸಿನಲ್ಲಿರುವ ಮಾತು ನನ್ನ ಬಾಯಿಂದ ಹೊರಬರುತ್ತಿದೆ, ಆದರೆ ನಾನು ಅದನ್ನು ಬಳಸಲಾರೆ ಎಂದು ದ್ರಾವಿಡ್ ಹೇಳುವ ಮೂಲಕ ವರದಿಗಾರರನ್ನು ರಂಜಿಸಿದರು.

 ನೀವು ಬಳಸಲು ಬಯಸಿದ ಪದ "ಅತಿರಂಜಿತವೇ? ಎಂದು ವರದಿಗಾರರೊಬ್ಬರು ಕೇಳಿದರು. "ಇಲ್ಲ, ಅತಿರಂಜಿತ ಅಲ್ಲ. ನಾಲ್ಕು ಅಕ್ಷರಗಳು, 'ಎಸ್' ನಿಂದ ಪ್ರಾರಂಭವಾಗುತ್ತವೆ ಎಂದು ರಾಹುಲ್ ದ್ರಾವಿಡ್ ಹೇಳುವ ಮೂಲಕ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com