ಸೆಲ್ಫಿ ವಿವಾದ: IPL ನಡುವೆ ಪೃಥ್ವಿ ಶಾಗೆ ಸಂಕಷ್ಟ; ಕ್ರಿಕೆಟಿಗನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸಪ್ನಾ ಗಿಲ್

ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಅವರು ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಪೃಥ್ವಿ ಶಾ-ಸಪ್ನಾ ಗಿಲ್
ಪೃಥ್ವಿ ಶಾ-ಸಪ್ನಾ ಗಿಲ್
Updated on

ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಅವರು ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. 

ಸಪ್ನಾ ಗಿಲ್ ಐಪಿಸಿಯ ಸೆಕ್ಷನ್ 354, 509, 324 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸಪ್ನಾ ಗಿಲ್ ಪೃಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್,​ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಕಿರುಕುಳ ಮತ್ತು ಬ್ಯಾಟ್‌ನಿಂದ ಹೊಡೆಯುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತನ ವಿರುದ್ಧ ಸಪ್ನಾ ಗಿಲ್ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣಗಳನ್ನು ದಾಖಲಿಸಿಕೊಳ್ಳುವಾಗ ಸಪ್ನಾ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಿದ್ದು, ಅದರಲ್ಲಿ ಲೈಂಗಿಕ ಶೋಷಣೆಯ ಬಗ್ಗೆ ನಮೂದಿಸಲಾಗಿದೆ.

ಇದಲ್ಲದೆ, ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಅವರು ಸತೀಶ್ ಕವಂಕರ್ ಮತ್ತು ಭಾಗವತ್ ಗರಾಂಡೆ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಸತೀಶ ಕವಂಕರ್ ಮತ್ತು ಭಾಗವತ ಗರಾಂಡೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಅಧಿಕಾರಿಗಳು. ಇಬ್ಬರೂ ತಮ್ಮ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಎಂದು ಸಪ್ನಾ ಆರೋಪಿಸಿದ್ದಾರೆ. ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 166ಎ ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.

ಪೃಥ್ವಿ ಶಾ ಸಂಕಷ್ಟ
ಕೆಲವು ವಾರಗಳ ಹಿಂದೆ ಭಾರತೀಯ ಕ್ರಿಕೆಟಿಗರಾದ ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ಮುಂಬೈನ ಬೀದಿಗಳಲ್ಲಿ ಜಗಳವಾಡಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪೃಥ್ವಿ ಶಾ ಮತ್ತು ಆತನ ಸ್ನೇಹಿತ ತನಗೆ ಕಿರುಕುಳ ನೀಡಿರುವುದಾಗಿ ಎಬಿಪಿ ಜೊತೆಗಿನ ವಿಶೇಷ ಸಂಭಾಷಣೆಯ ವೇಳೆ ಸಪ್ನಾ ಹೇಳಿದ್ದಳು. ಈಗ ಈ ಎರಡೂ ಪ್ರಕರಣಗಳು ಏಪ್ರಿಲ್ 17 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು, ಇದರಲ್ಲಿ ಪೃಥ್ವಿ ಶಾ ಪರವಾಗಿ ಯಾವ ವಾದಗಳನ್ನು ನೀಡಲಾಗುತ್ತದೆ ಮತ್ತು ಪೃಥ್ವಿ ಶಾಗೆ ನ್ಯಾಯಾಲಯ ಏನು ಹೇಳುತ್ತದೆ ಎಂಬುದನ್ನು ನೋಡಬೇಕು.

ಪೃಥ್ವಿ ಶಾ ಪ್ರಸ್ತುತ ಐಪಿಎಲ್ 16 ನೇ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಈ ವರ್ಷದ ಐಪಿಎಲ್ ಸೀಸನ್‌ನಲ್ಲಿ ಪೃಥ್ವಿ ಶಾ ಫಾರ್ಮ್ ಉತ್ತಮವಾಗಿಲ್ಲ. ಇದುವರೆಗೆ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಒಂದು ಪಂದ್ಯದಲ್ಲೂ ವಿಶೇಷತೆ ತೋರಲು ಸಾಧ್ಯವಾಗಿಲ್ಲ. ಹೀಗಾಗಿ ಪೃಥ್ವಿ ಶಾಗೆ ಮೈದಾನದ ಒಳಗೆ ಹಾಗೂ ಹೊರಗೆ ಕೆಟ್ಟ ವಾತಾವರಣ ನಿರ್ಮಾಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com