ಐರ್ಲೆಂಡ್‌ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ: ಡಕ್ವರ್ತ್ ನಿಯಮದಡಿ ಭಾರತಕ್ಕೆ 2 ರನ್ ಗೆಲುವು

ಇಲ್ಲಿನ ವಿಲೇಜ್ ಮೈದಾನದಲ್ಲಿ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಡಕ್ವರ್ತ್ ನಿಯಮ ಮೂಲಕ ಭಾರತ 2 ರನ್ ಗಳಿಂದ ಗೆಲುವು ಸಾಧಿಸಿತು.
ಭಾರತೀಯ ಆಟಗಾರರು
ಭಾರತೀಯ ಆಟಗಾರರು

ಡಬ್ಲಿನ್: ಇಲ್ಲಿನ ವಿಲೇಜ್ ಮೈದಾನದಲ್ಲಿ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಡಕ್ವರ್ತ್ ನಿಯಮ ಮೂಲಕ ಭಾರತ 2 ರನ್ ಗಳಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು. 

ಐರ್ಲೆಂಡ್ ನೀಡಿದ 140 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 6.5 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದಾಗ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 24, ಋತುರಾಜ್ ಗಾಯಕ್ವಾಡ್ ಔಟಾಗದೇ 19 ರನ್ ಗಳಿಸಿದರು.

ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ಸ್ ಕ್ರೀಸ್ ನಲ್ಲಿದ್ದಾಗ ಮಳೆ ಆರಂಭವಾಯಿತು. ನಂತರ ಡಕ್ವರ್ತ್ ನಿಯಮದಡಿಯಲ್ಲಿ ಎರಡು ರನ್ ಗಳಿಂದ ಗೆಲುವು ಸಾಧಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com