5ನೇ T20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ; ಸರಣಿ ಕೈ ವಶ 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 5 ನೇ ಟಿ20 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ರನ್ ಗಳ ಭರ್ಜರಿ ಜಯ ಗಳಿಸಿದೆ. 
ಭಾರತ ಕ್ರಿಕೆಟ್ ತಂಡ
ಭಾರತ ಕ್ರಿಕೆಟ್ ತಂಡ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 5 ನೇ ಟಿ20 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ರನ್ ಗಳ ಭರ್ಜರಿ ಜಯ ಗಳಿಸಿದೆ. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳ ಗುರಿ ನೀಡಿತ್ತು. 

ರನ್ ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಜೋಶ್ ಫಿಲಿಪ್ 4 ಎಸೆತಗಳಲ್ಲಿ 4 ರನ್ ಗಳನ್ನು ಗಳಿಸಿ ಔಟ್ ಆದರು. ಬಳಿಕ ಕ್ರೀಸ್ ಗೆ ಬಂದ ಬೆನ್ ಮೆಕ್ಡರ್ಮಾಟ್ 36 ಎಸೆತಗಳಲ್ಲಿ 54 ರನ್ ಗಳಿಸಿ ತಂಡ ಚೇತರಿಸಿಕೊಳ್ಳುವ ಆಟ ಆಡಿದರು. 

ಕೊನೆಯ ಕ್ಷಣದವರೆಗೂ ಆಸ್ಟ್ರೇಲಿಯಾ ತಂಡಕ್ಕೆ ಜಯಗಳಿಸುವ ಸಾಧ್ಯತೆ ಇತ್ತು. ಆದರೆ ಕೊನೆಯ 2 ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಆಸ್ಟ್ರೇಲಿಯಾಗೆ ಸವಾಲಾದರು. ಪರಿಣಾಮ ಭಾರತದ ಗೆಲುವಿನ ಹಾದಿ ಸುಗಮವಾಗಿ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ 6 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು. 

ಭಾರತದ ಪರ ಆರ್ಶ್ ದೀಪ್ ಸಿಂಗ್ 40 ರನ್ ಗಳನ್ನು ನೀಡಿ 2 ವಿಕೆಟ್ ಗಳಿಸಿದರೆ, ಮುಖೇಶ್ ಕುಮಾರ್ 32 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ರವಿ ಬಿಷ್ಣೋಯ್ 29 ರನ್ ನೀಡಿ 2 ವಿಕೆಟ್ ಗಳಿಸಿದರೆ, ಅಕ್ಸರ್ ಪಟೇಲ್ 14 ರನ್ ನೀಡಿ 1 ವಿಕೆಟ್ ಗಳಿಸಿದರು. ಭಾರತ 4-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com