ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಗೆ 'ಸಾಧಾರಣ' ರೇಟ್ ನೀಡಿದ ಐಸಿಸಿ

ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಗೆ ಐಸಿಸಿ 'ಸಾಧಾರಣ' ರೇಟ್ ನೀಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರು
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರು

ಅಹಮದಾಬಾದ್ : ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಗೆ ಐಸಿಸಿ 'ಸಾಧಾರಣ' ರೇಟ್ ನೀಡಿದೆ.

ಆದಾಗ್ಯೂ, ಔಟ್ ಫೀಲ್ಡ್ ತುಂಬಾ ಚೆನ್ನಾಗಿದೆ ಎಂದು  ICC ಮ್ಯಾಚ್ ರೆಫರಿ ಮತ್ತು ಮಾಜಿ ಜಿಂಬಾಬ್ವೆ ಬ್ಯಾಟರ್ ಆಂಡಿ ಪೈಕ್ರಾಫ್ಟ್ ರೇಟ್ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ನಿಧಾನ ಮತ್ತು ಮಂದಗತಿಯ ಪಿಚ್‌ನಲ್ಲಿ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ನಲ್ಲಿ ವಿಶ್ವಕಪ್ 2023 ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಭಾರತದ ಲೀಗ್ ಪಂದ್ಯಗಳಲ್ಲಿ ಬಳಸಲಾದ ಕ್ರಮವಾಗಿ ಕೋಲ್ಕತ್ತಾ, ಲಕ್ನೋ, ಅಹಮದಾಬಾದ್ ಮತ್ತು ಚೆನ್ನೈ ಪಿಚ್‌ಗಳನ್ನು ಐಸಿಸಿ 'ಸಾಧಾರಣ' ಎಂದು ರೇಟ್ ಮಾಡಿದೆ. ಆದಾಗ್ಯೂ, ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ನಡೆದ ವಾಂಖೆಡೆ ಸ್ಟೇಡಿಯಂ ಪಿಚ್ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮುನ್ನಾ ಆತಿಥೇಯರು ಪಿಚ್ ಬದಲಾಯಿಸಿರುವ ವರದಿಗಳು ಹರಿದಾಡಿತ್ತು. 

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿಫೈನಲ್‌ಗೆ ಆತಿಥ್ಯ ವಹಿಸಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್‌ಗೆ ಐಸಿಸಿ "ಸಾಧಾರಣ" ರೇಟಿಂಗ್ ನೀಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಆಸ್ಟ್ರೇಲಿಯ 47.2 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com