IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮಿಚೆಲ್ ಸ್ಟಾರ್ಕ್!

ಐಪಿಎಲ್-2024 ತಂಡಗಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. 
ಮಿಚೆಲ್ ಸ್ಟಾರ್ಕ್
ಮಿಚೆಲ್ ಸ್ಟಾರ್ಕ್
Updated on

ದುಬೈ: ಐಪಿಎಲ್-2024 ತಂಡಗಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. 

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ. ದುಬೈ ನಲ್ಲಿ ಐಪಿಎಲ್-2024 ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಇದಕ್ಕೂ ಮೊದಲು ಅತಿ ದುಬಾರಿ ಬೆಲೆಗೆ ಆಸ್ಟ್ರೇಲಿಯಾದ ಹಾಲಿ ನಾಯಕ ಪ್ಯಾಟ್‌ ಕಮಿನ್ಸ್ 20.5 ಕೋಟಿ ರೂಪಾಯಿ ಬೆಲೆಗೆ ಮಾರಾಟವಾಗಿದ್ದರು.

ಸ್ಟಾರ್ಕ್ ಅವರ ಮೂಲ ಬೆಲೆ 2 ಕೋಟಿ ರೂಪಾಯಿ ಇತ್ತು. ಮುಂಬೈ ಇಂಡಿಯನ್ಸ್ ಹಾಗೂ ದೆಹಲಿ ಕ್ಯಾಪ್ಟನ್ಸ್ ಸ್ಟಾರ್ಕ್ ಗಾಗಿ ಬಿಡ್ಡಿಂಗ್ ವಾರ್ ನಲ್ಲಿ ತೊಡಗಿದ್ದವು. ಕೊನೆಗೆ ಡೆಲ್ಲಿ ಕೈ ಚೆಲ್ಲಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಕೊನೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಟಾರ್ಕ್ ನ್ನು ಖರೀದಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com