ಐಸಿಸಿ ಪ್ರಶಸ್ತಿ ಪ್ರಕಟ: ಪಾಕ್ ನಾಯಕ ಬಾಬರ್ ಅಜಮ್ ಗೆ ಡಬಲ್ ಖುಷಿ

ಪಾಕಿಸ್ತಾನದ ನಾಯಕ ಬಾಬರ್ ಅಜಮ್ 'ವರ್ಷದ ಏಕದಿನ ಕ್ರಿಕೆಟಿಗ' ಮತ್ತು 'ಐಸಿಸಿ 2022ರ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ' ಎರಡಕ್ಕೂ ಆಯ್ಕೆಯಾಗಿ ಡಬಲ್ ಸಾಧನೆ ಮಾಡಿದ್ದಾರೆ.
ಬಾಬರ್ ಅಜಮ್
ಬಾಬರ್ ಅಜಮ್
Updated on

ದುಬೈ: ಪಾಕಿಸ್ತಾನದ ನಾಯಕ ಬಾಬರ್ ಅಜಮ್ 'ವರ್ಷದ ಏಕದಿನ ಕ್ರಿಕೆಟಿಗ' ಮತ್ತು 'ಐಸಿಸಿ 2022ರ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ' ಎರಡಕ್ಕೂ ಆಯ್ಕೆಯಾಗಿ ಡಬಲ್ ಸಾಧನೆ ಮಾಡಿದ್ದಾರೆ.

ಈ ಪ್ರಶಸ್ತಿಯ ರೇಸ್‌ನಲ್ಲಿ ಟಿಮ್ ಸೌಥಿ, ಬೆನ್ ಸ್ಟೋಕ್ಸ್ ಮತ್ತು ಸಿಕಂದರ್ ರಜಾ ಅವರನ್ನು ಸೋಲಿಸಿ ಈ ಸಾಧನೆ ಮಾಡಿದ್ದಾರೆ. ಬಾಬರ್ ಈ ಹಿಂದೆ 2021ರ ವರ್ಷದ ODI ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದರು.

2022ರಲ್ಲಿ ಬಾಬರ್ ಅಜಮ್ ತಮ್ಮ ಆಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು. ಬಾಬರ್ ಅಜಮ್ 2022ರಲ್ಲಿ ಬ್ಯಾಟ್ಸ್‌ಮನ್ ಆಗಿ ಉತ್ತಮ ಆಟವನ್ನು ಪ್ರದರ್ಶಿಸಿದ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ 2,598 ರನ್ ಗಳಿಸಿದರು. ಈ ಸಮಯದಲ್ಲಿ, ಬಾಬರ್ 8 ಶತಕ ಮತ್ತು 17 ಅರ್ಧ ಶತಕಗಳನ್ನು ಗಳಿಸಿದರು. 2022ರಲ್ಲಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ 2000ಕ್ಕಿಂತ ಹೆಚ್ಚು ರನ್ ಪೇರಿಸಿದ ಏಕೈಕ ಬ್ಯಾಟ್ಸ್‌ಮನ್ ಬಾಬರ್ ಆಗಿದ್ದಾರೆ.

2022ರಲ್ಲಿ ಬಾಬರ್ ಅಜಮ್ ಒಂಬತ್ತು ಪಂದ್ಯಗಳಲ್ಲಿ 84.87 ರ ಸರಾಸರಿಯಲ್ಲಿ 679 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು ಮೂರು ಶತಕಗಳು ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದರು. ಬಾಬರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1184 ರನ್ ಗಳಿಸಿದರು. T20 ಯಲ್ಲಿ ಬಾಬರ್ ಅಜಮ್ 26 ಪಂದ್ಯಗಳಲ್ಲಿ 31.95 ರ ಸರಾಸರಿಯಲ್ಲಿ 735 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳು ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com