ಶ್ರೀಲಂಕಾದ ಬ್ಯಾಟರ್ ಲಹಿರು ತಿರಿಮನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ!

ಶ್ರೀಲಂಕಾದ ಕ್ರಿಕೆಟಿಗ ಲಹಿರು ತಿರಿಮನ್ನೆ  ಭಾನುವಾರ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  33 ವರ್ಷದ ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದ ತಿರಿಮನ್ನೆ ಅವರು 2010 ರಲ್ಲಿ ಅಂತಾರಾಷ್ಟ್ರೀಯ  ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಇವರು 44 ಟೆಸ್ಟ್, 127 ಏಕದಿನ ಪಂದ್ಯಗಳು ಮತ್ತು 26 ಟಿ-20 ಪಂದ್ಯಗಳನ್ನಾಡಿದ್ದಾರೆ. 
ಲಹಿರು ತಿರಿಮನ್ನೆ
ಲಹಿರು ತಿರಿಮನ್ನೆ
Updated on

ಕೊಲಂಬೋ: ಶ್ರೀಲಂಕಾದ ಕ್ರಿಕೆಟಿಗ ಲಹಿರು ತಿರಿಮನ್ನೆ  ಭಾನುವಾರ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  33 ವರ್ಷದ ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದ ತಿರಿಮನ್ನೆ ಅವರು 2010 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ತಿರುಮನ್ನೆ 44 ಟೆಸ್ಟ್, 127 ಏಕದಿನ ಪಂದ್ಯಗಳು ಮತ್ತು 26 ಟಿ-20 ಪಂದ್ಯಗಳನ್ನಾಡಿದ್ದಾರೆ. 

ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ತಿರಿಮನ್ನೆ, ದಿಢೀರ್ ತೀರ್ಮಾನಕ್ಕೆ ಕಾರಣವನ್ನು ಬಹಿರಂಗಪಡಿಸಿಲ್ಲ, ಆದರೆ ತಮ್ಮ ಮಾಜಿ ಸಹ ಆಟಗಾರರು ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಸದಸ್ಯರಿಗೆ ತಮ್ಮ ಧನ್ಯವಾದ ತಿಳಿಸಿದ್ದಾರೆ.

"ಆಟಗಾರನಾಗಿ ನಾನು ನನ್ನ ಅತ್ಯುತ್ತಮ ಕೊಡುಗೆ ನೀಡಿದ್ದೇನೆ,  ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ, ನಾನು ಆಟವನ್ನು ಗೌರವಿಸುತ್ತೇನೆ ಮತ್ತು ತಾಯಿನಾಡಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಿರಿಮನ್ನೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿವೃತ್ತಿ  ಘೋಷಣೆ ಕಷ್ಟಕರವಾದ ನಿರ್ಧಾರವಾಗಿತ್ತು. ಆದರೆ ಈ ನಿರ್ಧಾರವನ್ನು ಸ್ವಇಚ್ಛೆಯಿಂದ ಅಥವಾ ಇಷ್ಟವಿಲ್ಲದೆ ತೆಗೆದುಕೊಳ್ಳಲು ನನ್ನ ಮೇಲೆ ಪ್ರಭಾವ ಬೀರಿದ ಅನೇಕ ಅನಿರೀಕ್ಷಿತ ಕಾರಣಗಳನ್ನು  ಉಲ್ಲೇಖಿಸಲಾರೆ. ಶ್ರೀಲಂಕಾ ಕ್ರಿಕೆಟ್ ಸದಸ್ಯರು, ತರಬೇತುದಾರರು, ತಂಡದ ಸಹ ಆಟಗಾರರು, ಫಿಸಿಯೋಗಳು, ತರಬೇತುದಾರರು ಮತ್ತು ವಿಶ್ಲೇಷಕರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ. 

ತಿರಿಮನ್ನೆ 2014 ರಲ್ಲಿ ಶ್ರೀಲಂಕಾದ ಐಸಿಸಿ T20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಮತ್ತು ಇನ್ನೂ ಎರಡು ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡರು. ಅವರು ಐದು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾದ ನಾಯಕತ್ವ ವಹಿಸಿದ್ದರು ಮತ್ತು ಎರಡು ಏಕದಿನ ವಿಶ್ವಕಪ್‌ಗಳಲ್ಲಿಯೂ ಆಡಿದರು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ  ಟೆಸ್ಟ್‌ನಲ್ಲಿ ಅವರು ಶ್ರೀಲಂಕಾ ಪರ  ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ ಎಂಟು ರನ್ ಗಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com