ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಕ್ರೀಸ್‌ಗೆ ತಡವಾಗಿ ಬಂದ ಏಂಜೆಲೊ ಮ್ಯಾಥ್ಯೂಸ್ ಗೆ ಔಟ್ ಕೊಟ್ಟ ಅಂಪೈರ್, ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಟರ್ ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲಿಲ್ಲ ಎಂದು ಅಂಪೈರ್ ಟೈಮ್ ಔಟ್ ಎಂದು ಘೋಷಿಸಿದ್ದಾರೆ.
ಅಂಪೈರ್ ಜೊತೆ ಏಂಜೆಲೊ ಮ್ಯಾಥ್ಯೂಸ್ ಚರ್ಚೆ
ಅಂಪೈರ್ ಜೊತೆ ಏಂಜೆಲೊ ಮ್ಯಾಥ್ಯೂಸ್ ಚರ್ಚೆ
Updated on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಟರ್ ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲಿಲ್ಲ ಎಂದು ಅಂಪೈರ್ ಟೈಮ್ ಔಟ್(timedout) ಎಂದು ಘೋಷಿಸಿದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ (BANvSL) ನಡುವಿನ ಪಂದ್ಯದ ವೇಳೆ ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ (angelo mathews) ಅವರನ್ನು ಟೈಮ್ ಔಟ್ ಎಂದು ಘೋಷಿಸಲಾಯಿತು. ವಾಸ್ತವವಾಗಿ, ಮ್ಯಾಥ್ಯೂಸ್ ತಪ್ಪಾದ ಹೆಲ್ಮೆಟ್‌ನೊಂದಿಗೆ ಮೈದಾನಕ್ಕೆ ತಲುಪಿದ್ದರು. ಅದರ ನಂತರ ಅವರು ತಮ್ಮ ತಂಡದ ಡಕೌಟ್‌ನಲ್ಲಿ ಸಿಗ್ನಲ್ ಮಾಡಿ ಮತ್ತೊಂದು ಹೆಲ್ಮೆಟ್ ತರಲು ಹೇಳಿದರು. ಇದೆಲ್ಲದರ ನಡುವೆ ಸಾಕಷ್ಟು ಸಮಯ ಕಳೆದಿತ್ತು. ಇದರಿಂದಾಗಿ ಅಂಪೈರ್ ಮ್ಯಾಥ್ಯೂಸ್ ಜೊತೆ ಈ ಬಗ್ಗೆ ಚರ್ಚಿಸಿದರು. 

ಆದರೆ ಬಾಂಗ್ಲಾದೇಶದ ಆಟಗಾರರು ಇದರಿಂದ ಕೆರಳಿದರು. ನಾಯಕ ಶಕೀಬ್ ಅಲ್ ಹಸನ್ 'ಟೈಮ್ ಔಟ್' ಗಾಗಿ ಅಂಪೈರ್‌ಗೆ ಮನವಿ ಮಾಡಿದರು. ಹೀಗಾಗಿ ಮೈದಾನದ ಅಂಪೈರ್ ಗಳು ಮ್ಯಾಥ್ಯೂಸ್ ಅವರನ್ನು ಔಟ್ ಎಂದು ಘೋಷಿಸಿದರು. 'ಟೈಮ್-ಔಟ್' ಎಂದು ಘೋಷಿಸಿದ ನಂತರ, ಮ್ಯಾಥ್ಯೂಸ್ ತುಂಬಾ ಕೋಪಗೊಂಡು ಅಂಪೈರ್ ಜೊತೆ ವಾಗ್ವಾದ ನಡೆಸಿದರು.

ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಔಟಾದ ನಂತರ, ಮತ್ತೊಬ್ಬ ಬ್ಯಾಟ್ಸ್‌ಮನ್ 3 ನಿಮಿಷಗಳಲ್ಲಿ ಕ್ರೀಸ್‌ನೊಳಗೆ ತಲುಪಬೇಕು. ಆದರೆ ಮ್ಯಾಥ್ಯೂಸ್ ಮೈದಾನಕ್ಕೆ ತಲುಪಿದ್ದರು. ಆದರೆ ಸಮಯಕ್ಕೆ ಕ್ರೀಸ್‌ಗೆ ತಲುಪಲಿಲ್ಲ. ಹೀಗಾಗಿ ಅಂಪೈರ್ ಗಳು ಅವರನ್ನು ಔಟ್ ಎಂದು ಘೋಷಿಸಿದರು. ಇನ್ನು ಮ್ಯಾಥ್ಯೂಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ ಔಟ್ ಆದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪಖ್ಯಾತಿಗೆ ಭಾಜನರಾಗಿದ್ದಾರೆ.

ಟೈಮ್ ಔಟ್ ಅಂದರೇನು?
ವಿಕೆಟ್ ಪತನದ ನಂತರ ಅಥವಾ ಬ್ಯಾಟ್ಸ್‌ಮನ್ ಗಾಯಗೊಂಡ ನಂತರ, ಮುಂದಿನ ಬ್ಯಾಟ್ಸ್‌ಮನ್ 3 ನಿಮಿಷಗಳಲ್ಲಿ ಕ್ರೀಸ್‌ಗೆ ಬಂದು ಚೆಂಡನ್ನು ಎದುರಿಸಬೇಕು. ಇದು ಸಾಧ್ಯವಾಗದಿದ್ದರೆ, ಎದುರಾಳಿ ತಂಡವು ಮೇಲ್ಮನವಿ ಸಲ್ಲಿಸಬಹುದು. ಬ್ಯಾಟ್ಸ್‌ಮನ್‌ಗೆ ಸಮಯ ಮೀರಿದಾಗ ಮತ್ತು ಅಂಪೈರ್ ಹೊಸ ಬ್ಯಾಟ್ಸ್‌ಮನ್‌ನನ್ನು ಔಟ್ ಎಂದು ಘೋಷಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com