ICC World Cup 2023 ಸೋಲಿನ ಎಫೆಕ್ಟ್; ಪಾಕ್ ಕ್ರಿಕೆಟ್'ನ ಎಲ್ಲಾ ಸ್ವರೂಪದ ನಾಯಕತ್ವಕ್ಕೆ ಬಾಬರ್ ಅಜಂ ರಾಜಿನಾಮೆ

ICC ODI ವಿಶ್ವಕಪ್ 2023 ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಪಾಕಿಸ್ತಾನ ತಂಡದಲ್ಲಿ ಕಂಪನ ಶುರುವಾಗಿದೆ. ಬಾಬರ್ ಅಜಮ್ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದ್ದಾರೆ.
ಬಾಬರ್ ಅಜಂ
ಬಾಬರ್ ಅಜಂ

ICC ODI ವಿಶ್ವಕಪ್ 2023 ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಪಾಕಿಸ್ತಾನ ತಂಡದಲ್ಲಿ ಕಂಪನ ಶುರುವಾಗಿದೆ. ಬಾಬರ್ ಅಜಮ್ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದ್ದಾರೆ.

ಬಾಬರ್ ರಾಜೀನಾಮೆ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಬ್ಬರು ವಿಭಿನ್ನ ನಾಯಕರನ್ನು ನೇಮಿಸಿದೆ. ಸ್ಟಾರ್ ವೇಗದ ಬೌಲರ್ ಶಾಹೀನ್ ಅಫ್ರಿದಿಗೆ ಟಿ20 ಮಾದರಿಯ ಕಮಾಂಡ್ ನೀಡಲಾಗಿದ್ದರೆ ಬ್ಯಾಟ್ಸ್‌ಮನ್ ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್ ತಂಡದ ಸಾರಥ್ಯ ವಹಿಸಲಿದ್ದಾರೆ. ಪಿಸಿಬಿ ಇನ್ನೂ ಏಕದಿನ ತಂಡದ ನಾಯಕನನ್ನು ಪ್ರಕಟಿಸಿಲ್ಲ.

T20 ನಾಯಕನಾಗಿ ನೇಮಕಗೊಂಡ ನಂತರ ಶಾಹೀನ್ ಅಫ್ರಿದಿ, ಬಾಬರ್ ಅವರನ್ನು ಹೊಗಳಿದ್ದಾರೆ. ಬಾಬರ್ ಆಜಂ, ನಿಮ್ಮ ಆದರ್ಶಪ್ರಾಯ ನಾಯಕತ್ವದಲ್ಲಿ ನಿಜವಾದ ಟೀಮ್‌ವರ್ಕ್ ಮತ್ತು ಸಹೋದರತ್ವವನ್ನು ನೋಡುವುದು ಒಂದು ಸೌಭಾಗ್ಯ ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದಿದ್ದಾರೆ. 

ಶಾಹೀನ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ, ಅವರು 27 ಟೆಸ್ಟ್, 53 ODI ಮತ್ತು 52 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 154, 196 ಮತ್ತು 48 ವಿಕೆಟ್ಗಳನ್ನು ಪಡೆದಿದ್ದಾರೆ. ಮಸೂದ್ 2013ರಲ್ಲಿ ಪಾದಾರ್ಪಣೆ ಮಾಡಿದ್ದರು. ಮಸೂದ್ 30 ಟೆಸ್ಟ್, 9 ODI ಮತ್ತು 19 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕ್ರಮವಾಗಿ 1597, 163 ಮತ್ತು 396 ರನ್ ಗಳಿಸಿದ್ದಾರೆ.

ಬಾಬರ್ ರಾಜೀನಾಮೆಯ ನಂತರ, ಪಿಸಿಬಿ ಬಾಬರ್ ಗೆ ಟೆಸ್ಟ್ ನಾಯಕರಾಗಿ ಮುಂದುವರಿಯುವ ಆಯ್ಕೆಯನ್ನು ನೀಡಿತು. ಆದರೆ ಬಾಬರ್ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಬಾಬರ್ ಅವರ ಕುಟುಂಬವನ್ನು ಸಂಪರ್ಕಿಸಿದ ನಂತರ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಪಿಸಿಬಿ ಅವರ ನಿರ್ಧಾರವನ್ನು ಗೌರವಿಸುತ್ತದೆ. ಆಟಗಾರನಾಗಿ ಅವರನ್ನು ಬೆಂಬಲಿಸುತ್ತದೆ ಎಂದು ಪಿಸಿಬಿ ಹೇಳಿದೆ. ಪಿಸಿಪಿ ಮುಖ್ಯಸ್ಥ ಝಾಕಾ ಅಶ್ರಫ್, ಬಾಬರ್ ನಿಜವಾಗಿಯೂ ವಿಶ್ವ ದರ್ಜೆಯ ಆಟಗಾರ. ಅವರು ಆಟಗಾರನಾಗಿ ಬೆಳೆಯಲು ನಾವು ಬಯಸುತ್ತೇವೆ ಎಂದು ಹೇಳಿದರು.

ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನವು ವಿಶ್ವಕಪ್‌ನಲ್ಲಿ 9 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿತ್ತು. ಪಾಕಿಸ್ತಾನ ಐದನೇ ಸ್ಥಾನ ಪಡೆದು ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ನಾಯಕತ್ವ ತೊರೆಯುವ ನಿರ್ಧಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಾಬರ್ ತಿಳಿಸಿದ್ದಾರೆ. ಇಂದು ನಾನು ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದು ಅವರು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ. ಇದು ಕಠಿಣ ನಿರ್ಧಾರವಾಗಿದೆ. ಆದರೆ ಇದನ್ನು ಮಾಡಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. 'ನಾನು ಎಲ್ಲಾ ಮೂರು ಸ್ವರೂಪಗಳಲ್ಲಿ ಆಟಗಾರನಾಗಿ ಪಾಕಿಸ್ತಾನವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ನಾನು ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇನೆ ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com