ಸುನೀಲ್ ಗವಾಸ್ಕರ್
ಸುನೀಲ್ ಗವಾಸ್ಕರ್

ವಿಶ್ವಕಪ್ ಕ್ರಿಕೆಟ್: ಭಾರತೀಯ ಸ್ಪಿನ್ನರ್ ಗಳಿಗೆ ನೆರವಾಗುವಂತೆ ಪಿಚ್ ಬದಲಾಯಿಸಲಾಗುತ್ತಿದೆಯೇ? ಗವಾಸ್ಕರ್ ಹೇಳಿದ್ದು ಹೀಗೆ...

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಸ್ಪಿನ್ನರ್ ಗಳಿಗೆ ಅನುಕೂಲವಾಗುವಂತೆ ಮೈದಾನದ ಪಿಚ್ ಬದಲಾಯಿಸಲಾಗುತ್ತಿದೆ ಎಂಬಂತಹ ವರದಿಗಳ ವಿರುದ್ಧ ಭಾರತದ ಕ್ರಿಕೆಟ್ ಲೆಜೆಂಡರಿ  ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. 

ಮುಂಬೈ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಸ್ಪಿನ್ನರ್ ಗಳಿಗೆ ಅನುಕೂಲವಾಗುವಂತೆ ಮೈದಾನದ ಪಿಚ್ ಬದಲಾಯಿಸಲಾಗುತ್ತಿದೆ ಎಂಬಂತಹ ವರದಿಗಳ ವಿರುದ್ಧ ಭಾರತದ ಕ್ರಿಕೆಟ್ ಲೆಜೆಂಡರಿ  ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. 

ವಾಖಂಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಕೊನೆ ಗಳಿಗೆಯಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತೆ ಬಿಸಿಸಿಐ ಪಿಚ್ ಬದಲಾಯಿಸಲಾಗಿತ್ತು ಎಂಬಂತಹ ಆರೋಪ ಕೇಳಿಬಂದಿತ್ತು.ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಸುನೀಲ್ ಗವಾಸ್ಕರ್, ಶಾಟ್ ಅಪ್, ಅಸಂಬದ್ದ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

"ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪಿದಾಗ, ಅದು ಯಾವಾಗಲೂ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಅದು ವಿಶ್ವಕಪ್ ಆಗಿದ್ದರೆ  ಹೆಚ್ಚು ವಿಶೇಷವಾಗಿದೆ. ಭಾರತ ಅದನ್ನು ತನ್ನದೇ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದೆ. ಭಾರತ ತಂಡ 400 ರನ್ ಗಡಿಗೆ ತಲುಪಿದೆ. ಇದೊಂದು ಅದ್ಬುತ ಪಿಚ್ ಆಗಿದೆ. ಇದರಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದೇವೆ. ಭಾರತದ ಸ್ಪಿನ್ನರ್‌ಗಳಿಗೆ ಅನುಕೂಲವಾಗುವಂತೆ ಪಿಚ್‌ ಸಿದ್ಧಪಡಿಸಲಾಗಿದೆ ಎಂಬುದು ಮುರ್ಖತನದ ಹೇಳಿಕೆ ಎಂದು ಕಿಡಿಕಾರಿದರು. 

ಟಾಸ್ ನಂತರ ಅಥವಾ ಇನ್ನಿಂಗ್ಸ್ ಮಧ್ಯದಲ್ಲಿ ಪಿಚ್ ಬದಲಾಯಿಸಲಾಗಿಲ್ಲ. ಈ ಪಿಚ್ ನಲ್ಲಿ ಉಭಯ ತಂಡಗಳು ಉತ್ತಮ ರನ್ ಗಳಿಸಿವೆ. ಹೀಗಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಸುನೀಲ್ ಗವಾಸ್ಕರ್ ತಾಕೀತು ಮಾಡಿದರು. 

Related Stories

No stories found.

Advertisement

X
Kannada Prabha
www.kannadaprabha.com