ICC World Cup 2023 Final: ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತೇ?

45 ದಿನಗಳ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇಂದು ಅಂತಿಮ ಘಟ್ಟ ತಲುಪಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಭಾರತ- ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ.
ಐಸಿಸಿ ವಿಶ್ವಕಪ್ (ಸಂಗ್ರಹ ಚಿತ್ರ)
ಐಸಿಸಿ ವಿಶ್ವಕಪ್ (ಸಂಗ್ರಹ ಚಿತ್ರ)

ನವದೆಹಲಿ: 45 ದಿನಗಳ ಕ್ರಿಕೆಟ್ ವಿಶ್ವಕಪ್ ಟೂರ್ನಿ ಇಂದು ಅಂತಿಮ ಘಟ್ಟ ತಲುಪಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಭಾರತ- ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ.
 
ಉಭಯ ತಂಡಗಳೂ ಟೂರ್ನಿಯಾದ್ಯಂತ ಅದ್ಭುತ ಪ್ರದರ್ಶನ ನೀಡಿವೆ. ಭಾರತ ಈ ವರೆಗೂ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 8 ರಲ್ಲಿ ಜಯಗಳಿಸಿದೆ.

ವಿಜೇತ ತಂಡಕ್ಕೆ ವಿಶ್ವಕಪ್ ಮುಡಿಗೇರುವುದರ ಜೊತೆಗೆ ದೊಡ್ಡ ಮೊತ್ತದ ಬಹುಮಾನವೂ ಸಿಗಲಿದೆ. 2 ನೇ ಸ್ಥಾನದಲ್ಲಿ ನಿಲ್ಲುವ ತಂಡಕ್ಕೂ ಬಹುಮಾನ ನೀಡುವುದಾಗಿ ಐಸಿಸಿ ಹೇಳಿದೆ.

ಐಸಿಸಿಯ ಘೋಷಣೆಯ ಪ್ರಕಾರ ವಿಜೇತ ತಂಡಕ್ಕೆ ಸುಮಾರು 4 ಮಿಲಿಯನ್ ಡಾಲರ್ (33,31,67,000 ರೂಪಾಯಿಗಳು) ಹಾಗೂ ಎರಡನೇ ಸ್ಥಾನದಲ್ಲಿರುವ ತಂಡಕ್ಕೆ 2 ಮಿಲಿಯನ್ ಡಾಲರ್ (16,65,83,500 ರೂಪಾಯಿ) ಸಿಗಲಿದೆ.

ಈ ಎರಡೂ ತಂಡಗಳನ್ನು ಹೊರತುಪಡಿಸಿ, 10 ತಂಡಗಳಿಗೆ  40,000 ಡಾಲರ್ ಸಿಗಲಿದ್ದು, ಟೂರ್ನಿಯ ಒಟ್ಟು ಬಹುಮಾನದ ಮೊತ್ತವೇ 10 ಮಿಲಿಯನ್ ಡಾಲರ್ ಆಗಿದೆ.

ಸೆಮಿ ಫೈನಲ್ಸ್ ನಲ್ಲಿ ಟೂರ್ನಿಯಿಂದ ಹೊರ ನಡೆದ ತಂಡಕ್ಕೆ 800,000 ಡಾಲರ್ ಬಹುಮಾನ, ಗ್ರೂಪ್ ಸ್ಟೇಜ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ತಂಡಗಳಿಗೆ (ಒಟ್ಟು 6 ತಂಡಗಳು) 100,000 ಡಾಲರ್ ಬಹುಮಾನ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com