ಭಾರತೀಯ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ: ನಟ ಚೇತನ್ ಅಹಿಂಸಾ

ಆಗಾಗ್ಗೆ ತಮ್ಮ ಸೈದ್ದಾಂತಿಕ, ಸಾಮಾಜಿಕ ಹೇಳಿಕೆಗಳಿಂದ ಸುದ್ದಿ ಹಾಗೂ ವಿವಾದಕ್ಕೊಳಗಾಗುವ ನಟ ಚೇತನ್ ಅಹಿಂಸಾ ಇದೀಗ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿಗೂ ಕಾರಣ ತಿಳಿಸಿದ್ದಾರೆ. 
ನಟ ಚೇತನ್ ಕುಮಾರ್
ನಟ ಚೇತನ್ ಕುಮಾರ್
Updated on

ಬೆಂಗಳೂರು: ಆಗಾಗ್ಗೆ ತಮ್ಮ ಸೈದ್ದಾಂತಿಕ, ಸಾಮಾಜಿಕ ಹೇಳಿಕೆಗಳಿಂದ ಸುದ್ದಿ ಹಾಗೂ ವಿವಾದಕ್ಕೊಳಗಾಗುವ ನಟ ಚೇತನ್ ಅಹಿಂಸಾ ಇದೀಗ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿಗೂ ಕಾರಣ
ತಿಳಿಸಿದ್ದಾರೆ. 

ಭಾರತೀಯ ಕ್ರಿಕೆಟ್ ನಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಚೇತನ್, ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು ಎಂದಿದ್ದಾರೆ.

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು.  6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com