'ಪ್ರಧಾನಿ ಮೋದಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಹೋಗಬಾರದಿತ್ತು'
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಮತ್ತು ಹಾಲಿ ಟಿಎಂಸಿ ಸಂಸದ ಕೀರ್ತಿ ಆಜಾದ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೀರ್ತಿ ಆಜಾದ್ ಅವರು, "ಡ್ರೆಸ್ಸಿಂಗ್ ರೂಮ್ ಯಾವುದೇ ತಂಡದ ಪವಿತ್ರ ಸ್ಥಳವಾಗಿದೆ. ಐಸಿಸಿ ಈ ಕೊಠಡಿಗಳಿಗೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶಿಸಲು ಅನುಮತಿಸುವುದಿಲ್ಲ. ಹೀಗಾಗಿ ಪ್ರಧಾನಿ ಮೋದಿ ಅವರು ಖಾಸಗಿ ಸಂದರ್ಶಕರ ಭೇಟಿ ಪ್ರದೇಶದಲ್ಲಿ, ಡ್ರೆಸ್ಸಿಂಗ್ ರೂಮ್ ಹೊರಗೆ ತಂಡವನ್ನು ಭೇಟಿಯಾಗಬೇಕಿತ್ತು. ನಾನು ಇದನ್ನು ಒಬ್ಬ ಕ್ರೀಡಾಪಟುವಾಗಿ ಹೇಳುತ್ತೇನೆ. ರಾಜಕಾರಣಿಯಾಗಿ ಅಲ್ಲ ಎಂದಿದ್ದಾರೆ.
"ನರೇಂದ್ರ ಮೋದಿ ಅವರು ತಮ್ಮ ಬೆಡ್ ರೂಮ್, ಡ್ರೆಸ್ಸಿಂಗ್ ರೂಮ್ ಅಥವಾ ಟಾಯ್ಲೆಟ್‌ನಲ್ಲಿ ತಮ್ಮ ಬೆಂಬಲಿಗರು ಬಂದು ಸಾಂತ್ವನ ಹೇಳಲು ಅಥವಾ ಅಭಿನಂದಿಸಲು ಅನುಮತಿಸುತ್ತಾರೆಯೇ? ಕ್ರೀಡಾ ಪಟುಗಳು ರಾಜಕಾರಣಿಗಳಿಗಿಂತ ಹೆಚ್ಚು ಶಿಸ್ತುಬದ್ಧರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಪ್ರಧಾನಿ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
"ಕೊನೆಯದಾಗಿ, ವ್ಯಕ್ತಿ ಮತ್ತು ಅವರ ತಂಡ ಭಾರತಕ್ಕಾಗಿ ಇದನ್ನು ಮಾಡಿದೆ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಆಹ್ವಾನಿಸಲಾಗಿಲ್ಲ. ಈಗ ಹೇಳಿ ಯಾರು ರಾಜಕೀಯ ಮಾಡುತ್ತಿದ್ದಾರೆ?"
ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ