ಪಾಂಡ್ಯ ನಿರ್ಗಮನ ಬೆನ್ನಲ್ಲೇ ನಾಯಕನಾಗಿ ಶುಭಮನ್ ಗಿಲ್ ಹೆಸರು ಘೋಷಿಸಿದ ಗುಜರಾತ್ ಟೈಟಾನ್ಸ್; ಗಿಲ್ ಹೇಳಿದ್ದೇನು?

ಹಾರ್ದಿಕ್ ಪಾಂಡ್ಯ ನಿರ್ಗಮನ ಬೆನ್ನಲ್ಲೇ ಗುಜರಾತ್ ಟೈಟಾನ್ಸ್(GT) ತನ್ನ ಹೊಸ ನಾಯಕನ ಘೋಷಿಸಿದೆ. ಶುಭಮನ್ ಗಿಲ್ ಈ ಯುವ ಭಾರತೀಯ ಆಟಗಾರ ಐಪಿಎಲ್, ಐಪಿಎಲ್ 2024ರ ಮುಂದಿನ ಋತುವಿನಲ್ಲಿ GTಯನ್ನು ಮುನ್ನಡೆಸಲಿದ್ದಾರೆ.
ಹಾರ್ದಿಕ್ ಪಾಂಡ್ಯ-ಶುಭ್ಮನ್ ಗಿಲ್
ಹಾರ್ದಿಕ್ ಪಾಂಡ್ಯ-ಶುಭ್ಮನ್ ಗಿಲ್

ಹಾರ್ದಿಕ್ ಪಾಂಡ್ಯ ನಿರ್ಗಮನ ಬೆನ್ನಲ್ಲೇ ಗುಜರಾತ್ ಟೈಟಾನ್ಸ್(GT) ತನ್ನ ಹೊಸ ನಾಯಕನ ಘೋಷಿಸಿದೆ. ಶುಭಮನ್ ಗಿಲ್ ಈ ಯುವ ಭಾರತೀಯ ಆಟಗಾರ ಐಪಿಎಲ್, ಐಪಿಎಲ್ 2024ರ ಮುಂದಿನ ಋತುವಿನಲ್ಲಿ GTಯನ್ನು ಮುನ್ನಡೆಸಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಖರೀದಿ ವಿಷಯ ಕಾವೇರಿಸಿತ್ತು. ಭಾನುವಾರ ಸಂಜೆ ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ಅನ್ನು ಉಳಿಸಿಕೊಂಡಿದೆ ಎಂಬ ವರದಿ ಬಂದಿತು. ಆದರೆ ಎರಡು ಗಂಟೆಗಳ ನಂತರ ಮತ್ತೊಂದು ವರದಿ ಅದನ್ನು ಅಲ್ಲಗಳೆದಿತ್ತು. ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿ ಮಾಡಲಾಗಿದೆ. ಮುಂದಿನ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಆಡಲಿದ್ದಾರೆ ಎಂದು ಹೇಳಿದರು.

ಈ ಎಲ್ಲಾ ಸುದ್ದಿಗಳ ನಡುವೆ ಇಂದು ಎರಡೂ ತಂಡಗಳು ಅಧಿಕೃತವಾಗಿ ಈ ಖರೀದಿಯನ್ನು ಪ್ರಕಟಿಸಿವೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗೆ ಮರಳಿದ್ದರೆ, ಗುಜರಾತ್ ಟೈಟಾನ್ಸ್‌ಗೆ ಶುಭಮನ್ ಗಿಲ್ ರೂಪದಲ್ಲಿ ಹೊಸ ನಾಯಕ ಸಿಕ್ಕಿದ್ದಾರೆ.

ಎರಡು ವರ್ಷಗಳ ಹಿಂದೆ, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಕೀರಾನ್ ಪೊಲಾರ್ಡ್ ರೂಪದಲ್ಲಿ ನಾಲ್ಕು ಆಟಗಾರರನ್ನು ಉಳಿಸಿಕೊಂಡಿತ್ತು. MI ಹಾರ್ದಿಕ್ ಅವರನ್ನು ಹರಾಜಿನಲ್ಲಿ ಖರೀದಿಸಲು ಕಣ್ಣಿಟ್ಟಿತ್ತು, ಆದರೆ ಅದಕ್ಕೂ ಮೊದಲು ಹೊಸ ತಂಡ ಗುಜರಾತ್ ಟೈಟಾನ್ಸ್ ಅವರನ್ನು ನಾಯಕನಾಗಿ ತಮ್ಮ ಶಿಬಿರದಲ್ಲಿ ಸೇರಿಸಿಕೊಂಡಿತ್ತು.

ಹಾರ್ದಿಕ್ ನಾಯಕತ್ವದಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಮೊದಲ ಋತುವಿನಲ್ಲಿ ವಿಜೇತವಾಗಿತ್ತು. ಆದರೆ ಈ ತಂಡವು ಐಪಿಎಲ್ 2023 ರಲ್ಲಿ ರನ್ನರ್ ಅಪ್ ಆಗಿ ಉಳಿಯಿತು. ಫೈನಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು.

ಅಹಮದಾಬಾದ್‌ನ 'ಲಿಟಲ್ ಪ್ರಿನ್ಸ್' ಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಗಿಲ್ ನಾಯಕತ್ವವನ್ನು ವಹಿಸಿಕೊಳ್ಳಲು ಹೆಮ್ಮೆಪಡುತ್ತೇನೆ. ಫ್ರಾಂಚೈಸಿ ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾನೆ. "ಗುಜರಾತ್ ಟೈಟಾನ್ಸ್‌ನ ನಾಯಕತ್ವವನ್ನು ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ ಮತ್ತು ಅಂತಹ ಉತ್ತಮ ತಂಡವನ್ನು ಮುನ್ನಡೆಸಲು ನನ್ನ ಮೇಲಿನ ನಂಬಿಕೆಗೆ ನಾನು ಫ್ರಾಂಚೈಸ್‌ಗೆ ಸಾಕಷ್ಟು ಧನ್ಯವಾದ ಹೇಳಲಾರೆ. ಅದನ್ನು ಸ್ಮರಣೀಯವಾಗಿಸೋಣ! ಎಂದು ಗಿಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com